ಕೆ. ಲ್ಯಾಂಗ್ಲೋ ಪಾರ್ಕ್‌ರ್ ಅವರ ಮೂಲ ಈ ಕೃತಿಯನ್ನು ಲೇಖಕ ಸಿಡ್ನಿ ಶ್ರೀನಿವಾಸ ಅವರು ‘ಆಸ್ಟ್ರೇಲಿಯಾದ ಜಾನಪದ ಕತೆಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಅಲ್ಲಿಯ ಆದಿವಾಸಿಗಳು ಕಟ್ಟಿದ ಕತೆಗಳಿವು. ನೀತಿ, ಸಹಕಾರ, ಉನ್ನತ ಆದರ್ಶ ಹೀಗೆ ವಿವಿಧ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಪ್ರಕೃತಿಯ ನಿಯಮಗಳ ಕುರಿತು, ಜಾಗೃತಿ ಮೂಡಿಸುವುದನ್ನೂ , ಮನುಷ್ಯನ ಗುಣದ ಸಣ್ಣತನವನ್ನು ವಸ್ತುವಾಗಿಸಿಕೊಂಡಿವೆ. ನಮ್ಮಲ್ಲಿಯ ಪಂಚತಂತ್ರಗಳ ಕಥೆಗಳಂತೆ ಇಲ್ಲಿಯೂ ಪ್ರಾಣಿಪಕ್ಷಿಗಳು , ಗಿಡ-ಮರಗಳು ಪಾತ್ರಧಾರಿಗಳಾಗಿವೆ. ನಾಗರಿಕತೆಯ ಸಂಸ್ಕತಿಯ ಉಳಿವಿಗಾಗಿ ಕಳಕಳಿಯನ್ನು ತೋರುತ್ತವೆ. .
ಸಿಡ್ಡಿ ಶ್ರೀನಿವಾಸ ಅವರು ಬೆಂಗಳೂರಿನವರು. ಇವರ ಮೂಲ ಹೆಸರು- ಕರ್ಕೆನಹಳ್ಳಿ ಶ್ರೀನಿವಾಸ. ಸದ್ಯ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿದ್ದಾರೆ. ಅಲನ್ ಟೂರಿಂಗ್ ಫೋರ್ಡ್, ಅಲ್ಬರ್ಟ್ ಐನ್ ಸ್ಟಿನ್, ಐಸಾಕ್ ನ್ಯೂಟನ್, ಗೆಲಿಲಿಯೊ, ಮೇರಿ ಕ್ಯೂರಿ, ಶ್ರೀನಿವಾಸ ರಾಮಾನುಜನ್ ಇವರ ಕುರಿತು ಜೀವನ ಚಿತ್ರಗಳನ್ನು ಚಿತ್ರಿಸಿರುವ ಕೃತಿಗಳನ್ನು ರಚಿಸಿದ್ದಾರೆ. ಲ್ಯಾಂಗ್ಲೊ ಪಾರ್ಕರ್ ಎ.ಕೆ. ಅವರ ಕೃತಿಯನ್ನು ‘ಆಸ್ಟ್ರೇಲಿಯಾದ ಜಾನಪದ ಕತೆಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ...
READ MORE