ಮಲಯಾಳಂ ಮಿನಿಕಥೆಗಳು

Author : ಪಾರ್ವತಿ ಜಿ. ಐತಾಳ್

Pages 136

₹ 120.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 080-26617100/26617755

Synopsys

ಮಲಯಾಳಂ ಲೇಖಕ ಪಿ.ಕೆ.ಪಾರಕ್ಕಡವು ಅವರ ಸಣ್ಣಕಥೆಗಳನ್ನು ಅನುವಾದಕಿ ಪಾರ್ವತಿ ಜಿ. ಐತಾಳ ಅವರು ಕನ್ನಡೀಕರಿಸಿದ್ದಾರೆ. ಏಕಕಾಲದಲ್ಲಿ ಕಣ್ಣುಕೋರೈಸುವ ನಕ್ಷತ್ರದ ಹೊಳಪಿನಂತೆಯೂ ಓದುಗನ ಮನಸ್ಸನ್ನು ಥಟ್ಟನೆ ಹಿಡಿದಿಡುವ ಉಲ್ಕೆಯಂತೆಯೂ ಕಾಣುವ ಕಥೆಗಳಿವು. ಕಾಲವು ನಕ್ಷತ್ರಗಳನ್ನು ಪೋಣಿಸಿ ಮಾಲೆಕಟ್ಟಿ ಆಗಸವನ್ನು ಸಿಂಗರಿಸುವಂತೆ ಕಾಣುವ ಈ ಕಥೆಗಳು ಬಹಳ ಎಚ್ಚರಿಕೆಯಿಂದ ಹೆಣೆದಂಥವು. ಇವುಗಳಲ್ಲಿ ಬದುಕಿನ ರಕ್ತ, ಕಣ್ಣೀರಿನ ಉಪ್ಪು ಮತ್ತು ಕನಸುಗಳ ದ್ರಾಕ್ಷಾರಸಗಳು ಸಮಪ್ರಮಾಣದಲ್ಲಿ ಕರಗಿ ಸೇರಿಕೊಂಡಿವೆ.

ಆಧುನಿಕ ಬದುಕಿನ ನೋವು, ಹತಾಶೆ, ತಲ್ಲಣ, ಮಹಾಮೌನಗಳು, ಋತುಭೇದ ಹಾಗೂ ಪ್ರಣಯೋನ್ಮಾದಗಳು ಇಲ್ಲಿ ಅಂತರ್ಧಾರೆಯಾಗಿ ಪ್ರವಹಿಸುತ್ತವೆ. ಗಾಢವಾದ ಜೀವನಾನುಭವಗಳನ್ನು ಪುಟ್ಟ ಪುಟ್ಟ ವಾಕ್ಯಗಳಲ್ಲಿ ಹಿಡಿದಿಟ್ಟು ಕಾವ್ಯಾತ್ಮಕವಾಗಿ ಅತಿ ಸೂಚ್ಯವಿಧಾನದಲ್ಲಿ ಹೇಳುವ ಈ ಕಥೆಗಳಲ್ಲಿ ಒಂದು ಫಿಲಾಸಫಿಯೂ ಇದೆ. ಆ ಫಿಲಾಸಫಿಯ ಒಳತಿರುಳೇ ಪಾರಕ್ಕಡವು ಅವರ, ಕಡಲ ಮೊರೆತಕ್ಕೆ ಕಿವಿಯಾಗಿಸುವ ಈ ಕಥೆಗಳ ಜೀವಾಳ. ಕನ್ನಡದಲ್ಲಿ ಇಷ್ಟೊಂದು ವೈಶಿಷ್ಟ್ಯಪೂರ್ಣ ಕಥೆಗಳು ಅಪರೂಪ.

About the Author

ಪಾರ್ವತಿ ಜಿ. ಐತಾಳ್
(23 July 1957)

ಪಾರ್ವತಿ ಜಿ.ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎಂಬ ಹಳ್ಳಿಯಲ್ಲಿ ಜುಲೈ 23, 1957ರಂದು ಜನಿಸಿದರು. 1981ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ  ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. 2012ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ 1988ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾರ್ವತಿ ಅವರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ...

READ MORE

Related Books