ಡಿ.ಎಚ್.ಲಾರೆನ್ಸ್ ನವ್ಯ ಸಾಹಿತ್ಯದ ಮೇಲೆ ಪ್ರಭಾವ ಬೀರಿದ ಪಾಶ್ಚಾತ್ಯ ಲೇಖಕರಲ್ಲಿ ಪ್ರಮುಖನಾದವನು. ಈತನ ಇಂಗ್ಲೆಂಡ್ ಮೈ ಇಂಗ್ಲೆಂಡ್ ಕೃತಿಯನ್ನು ಕನ್ನಡಕ್ಕೆ ತಂದವರು ಜಿ.ಎನ್. ರಂಗನಾಥ ರಾವ್.
ಮೊದಲನೆಯ ಮಹಾಯುದ್ದ ಭೀಕರ ಪರಿಣಾಮಗಳಿಂದ ಜರ್ಝರಿತವಾದ ಇಂಗ್ಲಿಷ್ ಸಮಾಜದ ಮಧ್ಯಮವರ್ಗ ಅದರಲ್ಲೂ ವಿಶೇಷವಾಗಿ ಶ್ರಮಜೀವಿಗಳ ಜೀವನಾನುಭವಗಳನ್ನು ಗ್ರಹಿಸಿಟ್ಟುಕೊಂಡ ಕಥಾನಕವನ್ನು ಇಲ್ಲಿ ಹೆಣೆಯಲಾಗಿದೆ. ಯುದ್ದ ಮತ್ತು ಆಧುನಿಕ ತಂತ್ರಜ್ಞಾನ ತಂದೊಡ್ಡಿದ ಕಷ್ಟನಷ್ಟಗಳು ಹಾಗೂ ಯಾಂತ್ರಿಕತೆಯಲ್ಲಿ ನೊಂದು ಬೆಂದ ಮನಸ್ಸುಗಳು ಇಂದ್ರಯಾಸಕ್ತಿ, ಭಾವೋದ್ವೀಪ, ಪ್ರೇಮ -ಪ್ರಣಯಗಳಲ್ಲಿ ಸಾಂತ್ವನ ಕಾಣುವ ಚಿತ್ರಣ ಈ ಕೃತಿಯಲ್ಲಿದೆ.
©2024 Book Brahma Private Limited.