ವಿವಿಧ ಭಾಷೆಗಳಿಂದ ಆಯ್ದು ಅನುವಾದಿಸಿದ ಕತೆಗಳ ಸಂಕಲನ. ಈ ಸಂಕಲನದಲ್ಲಿ ಸಾಲಿಯವರು ರವೀಂದ್ರನಾಥ ಟ್ಯಾಗೋರ್, ಗುಡಿಪಾಟಿ ವೆಂಕಟಾಚಲಂ, ಅರ್ನೆಸ್ಟ್ ಹೆಮಿಂಗ್ವೆ, ಹರ್ನಾಂಡೋ ಟೆಲ್ಲೆಝ್, ಕರ್ತಾರ್‌ಸಿಂಗ್ ದುಗ್ಗಲ್, ದೇವರಕೊಂಡ, ಬಾಲಗಂಗಾಧರ ತಿಲಕ್, ಕಾಳಿಪಟ್ನಂ ರಾಮಾರಾವು, ಪೌಲ್ ಝಕಾರಿಯಾ, ಮಹೆಜಬಿನ್, ಮಹಮ್ಮದ್ ಖದೀರ್ ಬಾಬು, ಎಂಡ್ಗೂರಿ ಮಾನಸ ಅವರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಡಾ. ನವೀನ್ ಹಳೆಮನೆ ಅವರು ’ಇಂಗ್ಲಿಷ್, ಕೊಲಂಬಿಯ, ಬಂಗಾಳಿ, ಪಂಜಾಬಿ, ಮಲಯಾಳಂ ಮತ್ತು ತೆಲುಗಿನ ಹನ್ನೊಂದು ವಿಶಿಷ್ಟ ಕಥ'ಗಳನ್ನು ತುಂಬಾ ಅಕ್ಕರೆಯಿಂದ ಇಲ್ಲಿ ಕನ್ನಡಕ್ಕೆ ತರಲಾಗಿದೆ. ಇಲ್ಲಿನ ಪ್ರತಿಯೊಂದು ಕಥೆಯ ವಸ್ತು ಮತ್ತು ಆಶಯಗಳು ಮೂಲಲೇಖಕರ ಅನನ್ಯ ಶೈಅಗೆ ಧಕ್ಕೆಯಾಗದಂತೆ, ಕನ್ನಡಕ್ಕೆ ಎಲ್ಲೂ ಅನ್ಯವೆನ್ನಿಸದ ಹಾಗೆ ಅನುವಾದಗೊಂಡಿವೆ. ಹಾಗೆಯೇ ದೇಶ-ಭಾಷೆ-ಕಾಲಗಳ ಎಲ್ಲೆ ಮೀರಿ ಎಲ್ಲೆಡೆ ಹರಡಿರುವ ಕಥನಾಕಾಶವು ಹಿಂಗೆ ಇಲ್ಲಿ ಕನ್ನಡದ ಕನ್ನಡಿಯಲ್ಲಿ ಪ್ರತಿಬಿಂಬಿತವಾಗಿದೆ. 'ಧರೆಗೆ ನಿದ್ರೆಯು ಇಲ್ಲ' ಎಂಬ ತನ್ನದೇ ಕಥಾಸಂಕಲನದಲ್ಲಿ ಒಂದರಂತೆ ಇನ್ನೊಂದಿಲ್ಲದ ನಿರೂಪಣಾ ಶೈಗಳ ಯಶಸ್ವಿ ಪ್ರಯೋಗದಿಂದ ಅಭಿಮಾನ ಹುಟ್ಟಿಸಿದ್ದ ದೋಸ್ತ ಸಾಲಿ, ಇಲ್ಲಿ ಕನ್ನಡಕ್ಕೆ ತಂದಿರುವ ಅನ್ಯ ಭಾಷೆಯ ಮನಸೂರೆಗೊಳ್ಳುವ ಕಥೆಗಳಿಗೂ ತನ್ನ ತೀವ್ರ ಭಾವುಕತೆಯ (ಅವನ ಪಕ್ಕಾ ಗುಣವೇ ಅದು) ಸ್ಪರ್ಶವಿತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು. ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...
READ MORE