‘ನೆರೆಯವರ ಕಥೆಗಳು’ ವೀರಭದ್ರರ ಸಮಗ್ರ ಅನುವಾದಿತ ಕಥೆಗಳು. ಕನ್ನಡ ಸಾಹಿತ್ಯ ಲೋಕದ ಅನನ್ಯ ಕತೆಗಾರ, ತೆರೆಮರೆಯಲ್ಲೇ ಅಪಾರ ಕೊಡುಗೆಗಳನ್ನು ನೀಡಿದ ವೀರಭದ್ರರ ಸಮಗ್ರ ಅನುವಾದಿತ ಕತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ. ಈಗಿನ ಆಂಧ್ರಕ್ಕೆ ಸೇರಿಕೊಂಡಿರುವ ಆದವಾನಿ ಜಿಲ್ಲೆಯಲ್ಲಿ ಹುಟ್ಟಿದ ವೀರಭದ್ರರು ಒಂದು ರೀತಿಯಲ್ಲಿ ಬಳ್ಳಾರಿ ಮತ್ತು ಆದವಾನಿ ಸೀಮೆಯ ಸೊಗಡನ್ನು ತಮ್ಮ ಬರಹಗಳಲ್ಲಿ ಬಳಸಿದ್ದಾರೆ. ಇಪ್ಪತ್ತರ ಹರೆಯದಲ್ಲೇ ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಗೆದ್ದದ್ದು, ಸ್ವತಂತ್ರವಾಗಿ ತೆಲುಗು, ಹಿಂದಿ ಭಾಷೆಯ ಕತೆ, ಕಾದಂಬರಿಗಳನ್ನು ಅನುವಾದ ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ 50-60ರ ದಶಕದಲ್ಲೇ ಭರವಸೆಯನ್ನು ಮೂಡಿಸಿದ್ದ ವೀರಭದ್ರರು, ಈ ಕೃತಿಯ ಮೂಲಕ ಆಂಧ್ರಪ್ರದೇಶದ ಪ್ರಖ್ಯಾತ ಕತೆಗಾರರ ಜನಪ್ರಿಯ 20 ಕತೆಗಳನ್ನು ಕನ್ನಡದ ಸೊಗಡಿಗೆ ತಕ್ಕಂತೆ ಅನುವಾದ ಮಾಡಿದ್ದಾರೆ.
©2024 Book Brahma Private Limited.