‘ಅಜ್ಜಿ ಹೇಳಿದ ಕಥೆಗಳು’ ರೋಹಿತ್ ಚಕ್ರತೀರ್ಥ ಅವರು ಅನುವಾದಿಸಿರುವ ಪರದೇಶಗಳ ಮಕ್ಕಳ ಕತಾ ಸಂಕಲನ. ಇಲ್ಲಿ ನೆರೆ ರಾಷ್ಟ್ರಗಳ ಪ್ರಚಲಿತ ಮಕ್ಕಳ ಕತೆಗಳನ್ನು ಕನ್ನಡೀಕರಿಸಲಾಗಿದೆ. ಮಕ್ಕಳ ಬೌದ್ಧಿಕ ಬೆಳೆವಣಿಗೆಗೆ ಕತೆಗಳ ಪಾತ್ರ ಮುಖ್ಯವಾದದ್ದು, ಅವರ ಆಲೋಚನಾಕ್ರಮ, ಕಾಲ್ಪನಿಕ ಶಕ್ತಿ ಹೆಚ್ಚಾಗಲು ಕತೆಗಳು ಸಹಕಾರಿಯಾಗುತ್ತವೆ. ಅದೇ ಕಾರಣದಿಂದಾಗಿ ವಿವಿಧ ದೇಶಗಳ ಪ್ರಸಿದ್ಧ ಮಕ್ಕಳ ಕತೆಗಳನ್ನು ಲೇಖಕ ರೋಹಿತ್ ಚಕ್ರತೀರ್ಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE