‘ಹಸಿರು ಬಾಗಿಲು’ ಎನ್. ರಾಮನಾಥ್ ಅವರು ಓ ಹೆನ್ರಿಯ ಪ್ರಸಿದ್ದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ಒಟ್ಟು 15 ಕಥೆಗಳನ್ನು ಒಳಗೊಂಡಿದೆ. ಅಂಟು ಸೂಜಿ, ಜನತೊರೆ, ಸ್ಪರ್ಶಕಾಟ, ಚಳಿದೇವ ಇಂಥ ಅನೇಕ ಪದಗಳನ್ನು ಟಂಕಿಸಲು ವಹಿಸಿರುವ ಸ್ವಾತಂತ್ಯ್ರವು ಇಲ್ಲಿ ಗಮನ ಸೆಳೆಯುತ್ತದೆ. ‘ಕಿರಾಣಿ ಅಂಗಡಿಯವನೊಡನೆ ಗಿಂಜಾಡಿ, ತರಕಾರಿಯವಳೊಡನೆ ಗಂಡಾಗುಂಡಿ ಮಾಡಿ , ಮಾಂಸ ಮಾರುವವನೊಡನೆ ಜುಗ್ಗಾಡಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೊಸರಾಡಿ ಒಂದೊಂದೇ, ಆಗಿ ಜೋಡಿಸಿದ ಪೆನ್ನಿಗಳು’ ಎಂಬಂಥ ವಾಕ್ಯ ಓ ಹೆನ್ರಿಯ ಮೂಲ ಕತೆಗಿಂತ ಸ್ವಲ್ಪ ದೂರವಾದರೂ ಕತಾನಾಯಕಿಯ ಮನೋಧರ್ಮವನ್ನು ತಿಳಿಸುತ್ತದೆ’ ಎಂದು ಹೇಳಿದ್ದಾರೆ.
ಲೇಖಕ ಎನ್. ರಾಮನಾಥ್ ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ ಪತ್ರಕರ್ತರು. ವಿಜಯಕರ್ನಾಟಕದಲ್ಲಿ ಅಕಂಣಕಾರರಾಗಿ ‘ವೀಕೆಂಡ್ ವಿನೋದ’, ಹಾಗೂ ಹೀಗೂ ಉಂಟು, ಸಂಗ್ಯಾ ಮಂಗ್ಯಾ ದೈನಿಕ ಅಂಕಣಗಳನ್ನು ಬರೆಯುತ್ತಿದ್ದಾರೆ. ಅವರ ‘ನಿದ್ರಾಂಗನೆಯ ಸೆಳವಿನಲ್ಲಿ’ ಕೃತಿಗೆ ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಕೃತಿಗಳು:ನಿದ್ರಾಂಗನೆಯ ಸೆಳವಿನಲ್ಲಿ, ಹಸಿರು ಬಾಗಿಲು (ಅನುವಾದ ಕೃತಿ) ...
READ MORE