ಲೇಖಕ ದಾದಾ ಜೆ.ಪಿ. ವಾಸ್ವಾನಿ ಅವರ ಆಕರ್ಷಕ ಉಪಕಥೆ ಮತ್ತು ಕಥೆಗಳ ಆಯ್ದ ನೂರೊಂದು ಕತೆಗಳ ಸಂಕಲನ ‘ನಿಮಗಾಗಿ ಮತ್ತು ನನಗಾಗಿ 101 ಕಥೆಗಳು’. ಮನಸ್ಸನ್ನು ಅರಳಿಸುವ, ಮಕ್ಕಳಿಗೆ ಮುದ ನೀಡುವ ಇಲ್ಲಿಯ ಒಂದೊಂದು ಕಥೆಯೂ ಅಮೂಲ್ಯ ಮುಕ್ತಕವಾಗಿದೆ. ನಮ್ಮಲ್ಲಿ ಶ್ರದ್ಧೆ, ತಾಳ್ಮೆ, ಧೈರ್ಯ, ಸಾಹಸಗಳ ಪ್ರಾಮುಖ್ಯತೆಯನ್ನು, ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸುವ ಚೈತನ್ಯವನ್ನು ಈ ಕೃತಿ ನೀಡಬಲ್ಲದು. ಸಾಹಿತಿ ಜಿ.ಎಸ್. ಸಿದ್ಧಲಿಂಗಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ 17ನೇ (1988-1992) ಅಧ್ಯಕ್ಷರಾಗಿದ್ದ ಜಿ.ಎಸ್.ಸಿದ್ಧಲಿಂಗಯ್ಯ, ವಚನ ಸಾಹಿತ್ಯ ವಿದ್ವಾಂಸರು, ಶಿಕ್ಷಣ ತಜ್ಞರು, ಕವಿಗಳು ಆಗಿದ್ದರು. ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 1931 ರ ಫೆ. 20 ರಂದು ಜನನ. ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ. ಮೈಸೂರು ವಿ.ವಿ.ಯಿಂದ 1961ರಲ್ಲಿ ಎಂ.ಎ. ಪದವೀಧರರು. ಸರ್ಕಾರಿ ಕಾಲೇಜಿನ ಅಧ್ಯಾಪಕ-ಪ್ರಾಧ್ಯಾಪಕ-ಪ್ರಾಂಶುಪಾಲರಾಗಿ ನಂತರ 1988 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. ವಿಮರ್ಶೆ : ಮಹಾನುಭಾವ ಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡ ಕಾವ್ಯ, ಕವನ ಸಂಕಲನ : ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಹಾಗೂ ಸಂಪಾದನೆ ...
READ MORE