ʻಟಿಕೆಟ್ ಇಲ್ಲ ಪ್ರಯಾಣ ನಿಲ್ಲಲ್ಲʼ ಕೃತಿಯಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳುವ ಜತೆಗೆ, ಬದುಕಿನ ಮಟ್ಟವನ್ನು ಸುಧಾರಿಸಿಕೊಳ್ಳಲು ಆಂಧ್ರಪ್ರದೇಶದಿಂದ ಕೊಚ್ಚಿಗೆ ವಲಸೆ ಹೋಗುವ ದಿನಗೂಲಿ ಕಾರ್ಮಿಕರ ಬದುಕಿನ ಬವಣೆಗಳು, ಟಿಕೆಟ್ ಖರೀದಿಸಲು ಹಣವಿಲ್ಲದೆ ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವ ಕಷ್ಟನಷ್ಟಗಳು ಮನೋಜ್ಞವಾಗಿ ಮೂಡಿಬಂದಿದೆ. ದುಡಿಮೆಗಾಗಿ ಪರರಾಜ್ಯಕ್ಕೆ ವಲಸೆ ಹೋಗಿರುವ ತನ್ನ ಪೋಷಕರು ತಮ್ಮ ದುಡಿಮೆಯ ಹಣದಲ್ಲಿ ತನಗೆ ಒಂದು ಜೊತೆ ಚಪ್ಪಲಿಯನ್ನಾದರೂ ಕೊಡಿಸುತ್ತಾರೆ ಎಂಬ ಬಾಲಕಿಯ ಆಶಯವನ್ನು ಬಿಂಬಿಸುವ ಕಥೆಯಂತೂ ಹೃದಯಸ್ಪರ್ಶಿ.
©2024 Book Brahma Private Limited.