ವಿಶ್ವಕಥಾಕೋಶದ 19ನೇ ಸಂಪುಟದಲ್ಲಿ ಸ್ಪೇನ್ ಮತ್ತು ಪೋರ್ಚುಗಲ್ ದೇಶದ ಕತೆಗಳಿವೆ. ಇಬ್ಬರು ಗೆಳೆಯರು -ಮಿಗ್ಯಾಲ್ ಸೆರ್‌ವಾಂತೆಷ್, ಒಬ್ಬ ಬುಲೆರೋಗೆ ಲಾಜರು ಸಲ್ಲಿಸಿದ ಸೇವೆ -ಡಿಯಾಗೊ ಉಡ್ತಾದು ದ ಮೆಂದೊಜಾ, ಎತ್ತರದ ಹೆಂಗಸು -ಪೇದ್ರು ಅಂತೊನ್ಯು ದ ಅಲರ್ಕಾಂವ್, ಸಾಕ್ರಟೀಸನ ಹು೦ಜ -ಲೆವೊಪೋಲ್ದು ಆಲಸ್ ,ಅಕ್ಕ ಅಂತೊನಿಯಾ -ರಾಮೊನ್ ದೆಲ್ ವಾಲೆ - ಇಂಕ್ಲನ್ ದಾನ್ ವಾಲ್ಪರನ ಪಿಟೀಲು -ಕಮಿಲ್ಲು ಜುಜೆ ಸೆಲಾ, ಮೊದಲ ಪ್ರೇಮ -ಎಮಿಲಿಯ ಪಾಡ್ದೊ ಬಾಜಾನ್, ಕೊನೆಯ ದೇವದೂತ -ಅಕಿಲೀನೊ ರಿಬೆಅರು, ಗ್ರಾಮದ ಧರ್ಮಗುರು ಅಲೆಷ್ಯಂದ್ರಿ ಎರ್ಕುಲಾನೊ, ಸಾಲ್ವತೆರ್‍ರದ ಕೊನೆಯ ಗೂಳಿ ಕಾಳಗ -ಝಂ ಆಂವ್ ರೆಬೆಲು ದ ಸಿಲ್ವ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE