ಖ್ಯಾತ ರಷ್ಯನ್ ಕಥೆ-ಕಾದಂಬರಿಕಾರ ಲಿಯೋ ಟಾಲ್ ಸ್ಟಾಯ್ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ ಲೇಖಕ-ಹಿರಿಯ ಪತ್ರಕರ್ತಜಿ.ಎನ್. ರಂಗನಾತರಾವ್ ಅವರ ಕೃತಿ-‘ಮಹಾಪ್ರಸ್ಥಾನ ಮತ್ತು ಇತರ ಕಥೆಗಳು’ ಮಹಾಪ್ರಸ್ಥಾನ, ಅಲರ್ಬ್ಟ್, ದೇವರ ಸತ್ಯ, ಒಬ್ಬನಿಗೆ ಎಷ್ಟು ಭೂಮಿ ಬೇಕು? ಹಾಗೂ ಪಾಪಿಷ್ಠನ ಪಶ್ಚಾತ್ತಾಪ ಹೀಗೆ ಒಟ್ಟು ಐದು ಕಥೆಗಳ ಕನ್ನಡಾನುವಾದವನ್ನು ಈ ಸಂಕಲನ ಒಳಗೊಂಡಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರು ಕೃತಿಗೆ ಮುನ್ನುಡಿ ಬರೆದು ‘ಜಿ.ಎನ್. ರಂಗನಾಥರಾವ್ ಅವರು ಮಾಡಿರುವ ಟಾಲ್ ಸ್ಟಾಯ್ ಕಥೆಗಳ ಅನುವಾದ ಕನ್ನಡದಲ್ಲಿರುವ ಅನುವಾದಿತ ಕೃತಿಗಳ ನಡುವೆ ಮುಖ್ಯವಾಗಲಿದೆ. ಟಾಲ್ ಸ್ಟಾಯ್ ನ ಕಾದಂಬರಿಗಳಷ್ಟೇ ಮುಖ್ಯವಾದ ಅವನ ಕಥೆಗಳಲ್ಲಿ ಮಹತ್ವವಾದದ್ದನ್ನು ರಂಗನಾಥರಾಯರು ಈಗ ಕನ್ನಡಕ್ಕೆ ಕೊಡುತ್ತಿರುವುದನ್ನು ಸ್ವಾಗತಿಸುವುದು ಸಂತೋಷದ ಸಂಗತಿ. ಇಂಥ ಅನುವಾದಿತ ಕೃತಿಗಳನ್ನು ನಮ್ಮ ವಿದ್ಯಾರ್ಥಿಗಳು ಪಠ್ಯವಾಗಿ ಪಡೆದರೆ ಕನ್ನಡ ಸಾರಸ್ವತ ಲೋಕ ಶ್ರೀಮಂತವಾಗುತ್ತದೆ. ಕನ್ನಡದಲ್ಲಿ ಪಾಠ ಮಾಡುವುದು ಅಧ್ಯಾಪಕರಿಗೆ ಸೃಜನಾತ್ಮಕ ಕೆಲಸವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಅನುವಾದಕ ಜಿ.ಎನ್. ರಂಗನಾಥರಾವ್ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ‘ಟಾಲ್ ಸ್ಟಾಯ್ ನ ಈ ಕಥೆಗಳನ್ನು ನಾನು ಇಂಗ್ಲಿಷಿನಿಂದ ತೆಗೆದುಕೊಂಡಿದ್ದೇನೆ. ಇವು ನೇರ, ಪದಶಃ ಅನುವಾದವಲ್ಲ. ಟಾಲ್ ಸ್ಟಾಯ್ ಕಥೆಗಳಿಗೆ ದೇಶ, ಭಾಷೆ, ಸಂಸ್ಕೃತಿಯ ಇತಿಮಿತಿಗಳಿಲ್ಲ. ಅವನ ಕಥೆಗಳಲ್ಲಿ ನಾವು ಮನುಷ್ಯರ ನಾಡಿಮಿಡಿತವನ್ನು, ವಿಶ್ವವ್ಯಾಪಿ ಕಾಣಬಹುದಾದಂಥ ಮನುಷ್ಯಲೋಕದ ವ್ಯಾಪಾರವನ್ನು, ಪಾತ್ರಗಳ ಹೆಸರು, ಸ್ಥಲ ಬದಲಾಯಿಸಿದರೆ ಅವು ನಮ್ಮ ನಿಮ್ಮೆಲ್ಲರ ಕಥೆಗಳಾಗಿ ಬಿಡುತ್ತವೆ ಎಂದೇ ಇಲ್ಲಿನದು ಅನುವಾದವಲ್ಲ. ಅನುಸೃಷ್ಟಿ. ಟಾಲ್ ಸ್ಟಾಯ್ ಕಥೆಗಳನ್ನು ಕನ್ನಡದಲ್ಲಿ ಪುನರ್ ಸೃಷ್ಟಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ...
READ MORE