ರಾಶೊಮಾನ್

Author : ಕೆ. ಪುಟ್ಟಸ್ವಾಮಿ

Pages 200

₹ 180.00




Year of Publication: 2022
Published by: ಅಭಿನವ ಪ್ರಕಾಶನ
Address: 17/18-2,ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 08023505825

Synopsys

ರ್‍ಯೂನೋಸುಕೆ ಅಕುತಗವ ಕತೆಗಳು ರಾಶೋಮಾನ್. ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಕೆ. ಪುಟ್ಟಸ್ವಾಮಿ. ಕೃತಿಯ ಬೆನ್ನುಡಿಯಲ್ಲಿ ಜಪಾನಿನ ಆಧುನಿಕ ಕಥನ ಸಾಹಿತ್ಯವನ್ನು ಹೊರಳುದಾರಿಗೆ ಎಳೆತಂದ ಯೂನೊಸ್‌ಕೆ ಅಕ್ ತಗವನ ಕಥೆಗಳು ಕಾಲ ಮತ್ತು ದೇಶಾತೀತವಾದ ಮನುಷ್ಯನ ಅಂತರಂಗಕ್ಕೆ ಕನ್ನಡಿ ಹಿಡಿಯುವ, ಸೌಂದರ್ಯ ಮತ್ತು ಭೀಭತ್ಸ ಮಿಲನಗೊಂಡ ವಿಲಕ್ಷಣ ಕಥಾನಕಗಳು. ತನ್ನ ಮನಸ್ಸಿನ ತುಮುಲಗಳನ್ನೆಲ್ಲ ಬಸಿದು ಕತೆಯಾಗಿಸಿದ ಅಕ್ ತಗವ ಸಮಾಜದ ಮೌಲ್ಯಗಳನ್ನು ಪ್ರಶ್ನಿಸುತ್ತಾನೆ. ಮನುಷ್ಯನ ಸಂಕೀರ್ಣ ಮನಸ್ಸಿನ ಭಾವಗಳಿಗೆ ನಾಟಕೀಯ ರೂಪ ನೀಡುತ್ತಾನೆ. ಅಂತರಂಗದ ಪಾತಳಿಗಳಲ್ಲಿರುವ ಅಹಂಕಾರವನ್ನು ಹೊರಗೆಳೆಯುತ್ತಾನೆ. ಮನುಷ್ಯನ ಅಪ್ರಾಮಣಿಕತೆಗೆ ಕನ್ನಡಿ ಹಿಡಿಯುತ್ತಾನೆ. ಚಲತ್ರೆ, ಪುರಾಣ, ಸಮಕಾಲೀನ ಬದುಕು, ಫ್ಯಾಂಟಸಿ ಎಲ್ಲವನ್ನು ಬಳಸಿಕೊಂಡು ಅನೂಹ್ಯವಾದ ಮನುಷ್ಯನ ಅಂತರಂಗವನ್ನು ಶೋಧಿಸಿ ಕತೆಯಾಗಿಸುತ್ತಾನೆ. ಅಹಮಿಕೆ-ಸ್ವಾಭಿಮಾನ, ವಾಸ್ತವ-ಭ್ರಮೆ, ನೀತಿ-ಅನೀತಿಗಳ ನಡುವೆ ಗೆರೆಹೊರೆಯದೆ ವಿಹ್ವಲಗೊಳಿಸುವ ಕಥೆಗಳಿಂದ ಬೆಚ್ಚಿಬೀಳಿಸುತ್ತಾನೆ. ಅಪೂರ್ವವಾದ ವ್ಯಂಗ್ಯ, ರಂಜನೆ, ಸಿಟ್ಟು ಬೆರೆತ ಸಾಮಾಜಿಕ ಟೀಕೆಯ ಅವನ ನಿರೂಪಣಿಗಳು ಜೆನ್ ಕತೆಗಳ ಅಸಂಗತವನ್ನು, ಆಳವಾದ ದರ್ಶನವನ್ನು ಕಟ್ಟುವ ರಚನೆಗಳು. ಜಗತ್ತಿನ ಸಿನಿಮಾ ನೋಡುಗರು ಬೆಚ್ಚಿ ಎದ್ದುಕೂರುವಂತೆ ಮಾಡಿದ ಅಕಿರ ಕುರೊಸಾವನ ರಾಶೊಮಾನ್ ಚಿತ್ರವು ಅದರ ನಿರ್ದೆಶಕನ ಜೊತೆಯಲ್ಲಿಯೇ ಕತೆಗಾರ ಅಕ್ ತಗವನನ್ನು ಜಗತ್ತಿಗೆ ಪಲಚಯಿಸಿತು, ಈಗಲೂ ಜಗತ್ತಿನ ಸಾಹಿತ್ಯ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿರುವ ಯೂನೊಸ್‌ಕೆ ಅಕ್ ತಗವನ ಕಥೆಗಳು ಕನ್ನಡಕ್ಕೆ ಈ ಪ್ರಮಾಣದಲ್ಲಿ ಪಲಚಯವಾಗುತ್ತಿರುವುದು ಇದೇ ಮೊದಲು ಎಂಬ ಮಾತುಗಳಿವೆ.

About the Author

ಕೆ. ಪುಟ್ಟಸ್ವಾಮಿ

ಕೆ.ಪುಟ್ಟಸ್ವಾಮಿ- ಹುಟ್ಟಿದ್ದು ಕನಕಪುರ ತಾಲೂಕಿನ ವರಗೆರಹಳ್ಳಿಯಲ್ಲಿ. ಕನಕಪುರ ಕೆ.ಜಿ.ಎಫ್ ಮುಂತಾದೆಡೆಗಳಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲಮಾ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿ.  ಪತ್ರಕರ್ತರಾಗಿ, ಕರ್ನಾಟಕ ಸರಕಾರದ ವಾರ್ತಾ ಇಲಾಖೆ, ಅರಣ್ಯ, ಜೀವ ಪರಿಸರ, ಹಿಂದುಳಿದ ವರ್ಗಗಳ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂತಾದೆಡೆ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ...

READ MORE

Related Books