ವಿಶ್ವಕಥಾಕೋಶದ 18ನೇ ಸಂಪುಟದಲ್ಲಿ ಜರ್ಮನಿಯ ಕತೆಗಳಿವೆ. ಬಾಲಮೇಧಾವಿ -ಟೊಮಾಸ್ ಮಾನ್ ಆಸರೆ -ಅನ್ನಾ ಸೇಘರ್ಸ್ ಎರಡು ನಿಮಿಷ -ಬ್ರೂನೋ ಅಪಿಟ್ಸ್ ಸರಳ ಸಂಗತಿಗಳು ವಾಲ್ಟರ್ ಕೌಫ್‌ಮಾನ್ ದಿವ್ಯದರ್ಶನ -ಆರ್ನೋಲ್ಡ್ ಟ್‌ವೈಗ್ ಕಳಾಹೀನೆ ಅನ್ನಾ -ಹೈನ್‌ರಿಕ್ ಬೂಲ್ ಎಡಚರು -ಗೂಂಟರ್ ಗ್ರಾಸ್ ನರಕದೊಳಗೊಂದು ಸ್ವಗತ -ಗೂ೦ಟರ್ ಹೋಫೆ ಕತ್ತಲಲ್ಲಿ ಹುಟ್ಟತೊಂದು ಭಾಷೆ -ವೋಲ್ಫ್‌ಗಾಂಗ್ ಕೋಲ್‌ಹಾಸೆ ನಿಜವಾಗಿ ಅಳಿಯುವುದು ಕಟ್ಟಕಡೆಯ ವ್ಯಕ್ತಿ ಮಾತ್ರ -ಡೀನಾ ನೇಲ್‌ಕೆನ್ ಎಪ್ಪತ್ತು ವರ್ಷ -ಗೂ೦ಟರ್ ರ್ಯೂಕರ್ ಇಬ್ಬರು ಮಕ್ಕಳು -ಬೆರ್‌ಟೋಲ್ಟ್ ಬ್ರೆಶ್ಟ್ ದೊಡ್ಡ ಪಡಸಾಲೆಯಲ್ಲಿ -ಟಿಯೋಡೋರ್ ಶ್ಟೋರ್ಮ್ ಕ್ಷಮಿಸವರನೆಲೆ ತಂದೆ -ಯೊಹಾನ್ ಪೇಟೆರ್ ಹೇಬೆಲ್ ಗೋರಿಯಿಂದಾಚೆಗೂ ಜಾರದಿದೆ ನೆನಪು -ಯೊಹಾನ್ ವೋಲ್ಫ್‌ಗಾಂಗ್ ಫಾನ್ ಗುಅಟೆ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE