ಮರಾಠಿ ಮೂಲದ ಶರಣ ಕುಮಾರ ಲಿಂಬಾಳೆ ಬರೆದಿರುವ ಅಸ್ಪೃಶ್ಯ ಕಥಾ ಸಂಕಲನವನ್ನು ಪ್ರಮೀಳಾ ಮಾಧವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ದಲಿತ, ಅಸ್ಪೃಶ್ಯ ಜಾತಿಯವರನ್ನು ಈ ಸಮಾಜ ನೋಡುವ ರೀತಿ, ಭಾರತದ ದಲಿತರ ಕಥನ ಈ ಕೃತಿಯಲ್ಲಿದೆ. ಇದು ಕಥೆಯೇ ಆಗಿದ್ದರೂ ನೈಜ ಘಟನೆಗಳ ಆಧಾರದ ಮೇಲೆ ರೂಪುಗೊಂಡ ಕಥೆಗಳು ಎಂದೂ ಹೇಳಿದರೆ ತಪ್ಪಾಗಲಾರದು.
ಪ್ರಮೀಳಾ ಮಾಧವ್ ಅವರು ಬೆಂಗಳೂರಿನ ಆಚಾರ್ಯ ವಾಣಿಜ್ಯ ಕಾಲೇಜಿನಲ್ಲಿ ಅಧ್ಯಾಪಕಿ. ಮೂಲತಃ ಕಾಸರಗೋಡಿನವರಾದ ಅವರು ಹೈಸ್ಕೂಲ್ ಶಿಕ್ಷಣವನ್ನು ಬಿಇಎಂ ಹೈಸ್ಕೂಲ್ ನಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ಕಾಸರಗೋಡು ಸರ್ಕಾರಿ ಪದವಿ ಕಾಲೇಜಿನಲ್ಲಿ ಪಡೆದರು. ಅವರೀಗ ಬೆಂಗಳೂರು ನಿವಾಸಿ. ಮರಾಠಿಯಿಂದ ಕನ್ನಡಕ್ಕೆ ಅನುವಾದಿಸುತ್ತಾರೆ. ಶರಣಕುಮಾರ ಲಿಂಬಾಳೆ ಅವರ ’ಬಹುಜನ’, ’ಹಿಂದೂ-ಸವರ್ಣ-ದಲಿತ ಸಂಘರ್ಷ, ನರವಾನರ ಕೃತಿಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ...
READ MORE