ಲೇಖಕ ಜಿ.ಎನ್. ರಂಗನಾಥರಾವ್ ಅವರ ಸಂಪಾದಿತ ಕೃತಿ-ಝೆನ್ ಕತೆಗಳು, ಕವಿತೆಗಳು, ಒಗಟುಗಳೂ. ಬೌದ್ಧ ಧರ್ಮವನ್ನು ಅಪ್ಪಿಕೊಂಡಿರುವ ಝೆನ್ ತತ್ವಜ್ಞಾನವು ಸಂಕೇತಗಳ ಮೂಲಕ ಒಗಟುಗಳ ಮೂಲಕ ಬೆಡಗಿನ ರೂಪದಲ್ಲಿ ಕಥೆಗಳೂ, ಕವಿತೆಗಳು ಹಾಗೂ ಒಗಟುಗಳನ್ನು ರಚಿಸಿದ್ದು, ಅವುಗಳನ್ನು ಲೇಖಕರು ಅನುವಾದಿಸಿ, ಸಂಪಾದಿಸಿದ್ದೇ ಈ ಕೃತಿ. ಇಲ್ಲಿಯ ಕವಿತೆಗಳು, ಕಥೆಗಳು ಹಾಗೂ ಒಗಟುಗಳು ಮೌಲ್ಯಯುತ ಜೀವನ ಸಂದೇಶ ಕುರಿತು ಮಾತನಾಡುತ್ತವೆ.
ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ...
READ MORE