‘ಝೆನ್ ಬೆರಗು- ಸಂಪುಟ- 1’ ಕನ್ನಡದ ಝೆನ್ ಕತೆಗಳು ಲೇಖಕಿ ಜಿ.ಆರ್. ಪರಿಮಳಾ ರಾವ್ ಅವರ ಅನುವಾದಿತ ಕತಾ ಸಂಕಲನ. ಈ ಕೃತಿಗೆ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಝೆನ್ ಎಂದರೆ 'ಧ್ಯಾನ' ಎಂದೇ ಅರ್ಥ. ಇದು ಬೌದ್ಧ ಪರಂಪರೆಯ ಮಾತು. 'ಝೆನ್ ಬುದ್ಧಿಸಂ' ಒಂದುಂಟು. ನಾವು ಮಾಡುವ 'ಝೆನ್ ಮಂತ್ರ' ಕತೆಯ ಆಕಾರ ತಾಳಿದಾಗ ಎಷ್ಟೆಷ್ಟು ಬಗೆಯ ವೈವಿಧ್ಯತೆಗೆ ಅವಕಾಶ ಕೊಡುಬಹುದೆಂಬುದನ್ನು ಜಿ.ಆರ್. ಪರಿಮಳಾ ರಾವ್ ತಮ್ಮ 'ಝೆನ್ ಬೆರಗು' ಕತೆಗಳ ಮಾಲೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಇವು ಅಪ್ಪಟ ಕನ್ನಡದ ಝನ್ ಕತೆಗಳು, ಕನ್ನಡದ ಮೊತ್ತ ಮೊದಲ ಝನ್ ಕತೆಗಳೆಂದರೆ ತಪ್ಪಾಗಲಾರದು ಎಂದಿದ್ದಾರೆ ಮಲ್ಲೇಪುರಂ ಜಿ.ವೆಂಕಟೇಶ್. ಹಾಗೇ ಶ್ರೀಮತಿ ಜಿ.ಆರ್. ಪರಿಮಳಾ ರಾವ್ ಮುನ್ನೂರಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ. ಇಲ್ಲಿಯ ಕತೆಗಳು ವಿಸ್ಮಯ, ಕೌಶಲ್ಯ, ಒಳವರ್ಮ, ರಹಸ್ಯ ಈ ಬಗೆಯ ಆಶಯಗಳನ್ನು ಒಳಗೊಂಡಿದೆ. ಇಲ್ಲಿ ಕನ್ನಡ ಕಥನವು ಹೂವಿನ ಪರಿಮಳದಂತೆ ಪರಮನವೇ ಹೌದು! ಪ್ರತಿಯೊಬ್ಬ ಓದುಗನೂ ಝೆನ್‌ಗೆ ಬೆರಗಾಗುವುದು ಅನಿವಾರ್ಯವೆನಿಸುತ್ತದೆ. ಇಂಥ ಅಪೂರ್ವ ಕಥನವನ್ನು, ಭಾಷೆಯನ್ನು, ನುಡಿತವನ್ನು ಮತ್ತು ಸ್ವರವನ್ನು ಮೀಟಿರುವ ಶ್ರೀಮತಿ ಜಿ.ಆರ್. ಪರಿಮಳಾ ರಾವ್ ಅವರನ್ನು ನಾನಂತು ಮನಸಾರೆ ಅಭಿನಂದಿಸುತ್ತೇನೆ. ಇದು ಝೆನ್ ಕತೆಗಳ ನಕಲುಗಳಲ್ಲ. ಆದರೆ ಅವುಗಳ ಬೆಳಕಿನಲ್ಲಿ ಅರಳಿರುವ ಕುಸುಮಗಳು, ಇವು ಕನ್ನಡದ ಸಹಜತೆಯಲ್ಲಿ ಅರಳಿರುವ ಹೂಗಳು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ. ...
READ MORE