"ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್" ಇದು ಎಂ.ಜಿ. ರಂಗಸ್ವಾಮಿಯ ಕಥಾ ಸಂಕಲನ . ಫ್ರಾನ್ಸಿಸ್ ಬುಕ್ಯಾನನ್ ಈಸ್ಟ್ ಇಂಡಿಯಾ ಕಂಪನಿಯ ಬಂಗಾಳ ಪ್ರಾಂತ್ಯದಲ್ಲಿ ವೈದ್ಯಾಧಿಕಾರಿಯಾಗಿದ್ದವನು. ಬ್ರಿಟಿಷರು ತಮ್ಮ ಅಧೀನದಲ್ಲಿದ್ದ ಮದ್ರಾಸ್, ಮೈಸೂರು, ಕೆನರಾ ಮತ್ತು ಮಲಬಾರ್ ರಾಜ್ಯಗಳಲ್ಲಿನ ಕೃಷಿ, ಕಲೆ, ವಾಣಿಜ್ಯ, ಆರ್ಥಿಕ-ಧಾರ್ಮಿಕ ಸ್ಥಿತಿ-ಗತಿಗಳು ಹಾಗೂ ಅಲ್ಲಿಯ ಜನ ಸಮುದಾಯಗಳು, ಬುಡಕಟ್ಟುಗಳು, ಅವರ ಜೀವನ ವಿಧಾನ ಮತ್ತು ಆಚರಣೆ-ಸಂಪ್ರದಾಯಗಳನ್ನಲ್ಲದೆ ಸ್ಥಳೀಯ ಇತಿಹಾಸ ಕುರಿತು ಅಧ್ಯಯನಾತ್ಮಕ ವರದಿ ಮಾಡಲು ಅವನನ್ನು ಕ್ರಿ.ಶ.1800ರಲ್ಲಿ ನಿಯೋಜಿಸಿದರು. ಅವನ ಈ ಪ್ರವಾಸಕ್ಕೆ ತೆಗೆದುಕೊಂಡ ಅವಧಿ ಒಂದೂಕಾಲು ವರ್ಷ. ಅವನ ಈ ಮಹಾ ಪಯಣದಲ್ಲಿ ಕಂಡುಂಡ ಅನುಭವ ಕಥನ 2000ಕ್ಕೂ ಹೆಚ್ಚು ಪುಟಗಳಷ್ಟು ವಿಸ್ತಾರವಾಗಿದ್ದು ಅದನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾನೆ. ಇದೊಂದು ಸಾಂಸ್ಕೃತಿಕ ದಾಖಲೆ. ಇನ್ನೂರು ವರ್ಷದ ಕೆಳಗಿನ ಪ್ರಾಂತ್ಯಗಳ ಬದುಕಿನೊಳಗೊಂದು ಇಣುಕು ನೋಟದಂತಿರುವ ಈ ಅಧ್ಯಯನ ಪ್ರವಾಸ ಕಥನ ಕಳ್ಳಕಾಕರ, ಹುಲಿಯಂಥ ಕಾಡು ಪ್ರಾಣಿಗಳ ಪರಿಸರದಲ್ಲಿ ಸಂಚರಿಸಿ ವರದಿ ಮಾಡುವ ರೋಚಕ ಯಾತ್ರೆಯೂ ಆಗಿದೆ.ಇಂಥದೊಂದು ಅಮೂಲ್ಯ ಕೃತಿಯನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಎಂ.ಜಿ. ರಂಗಸ್ವಾಮಿ ಅನುವಾದಿಸಿದ್ದಾರೆ.
©2024 Book Brahma Private Limited.