ಮಹಮೂದಾ ಬೇಗಂ ಅರಸೀಕೆರೆ ಮತ್ತು ರತ್ನಾ ಮಣೂರ ಉಭಯ ಲೇಖಕರು ಕನ್ನಡಕ್ಕೆ ಅನುವಾದ ಮಾಡಿರುವ ಉರ್ದುವಿನ ಕಥೆಯು ಎಲ್ಲರ ಮನಸ್ಸನ್ನೂ ತಟ್ಟಿ, ಉರ್ದು ಭಾಷೆಯ ಬಗ್ಗೆ ಸರಳ ಮತ್ತು ಸಾಮಾನ್ಯ ಜ್ಞಾನವನ್ನು ಅವರಲ್ಲಿ ಉಂಟುಮಾಡುವ ರೀತಿಯಲ್ಲಿ ಸರಳವಾಗಿ ಉಭಯ ಲೇಖಕರು ವಿಷಯವನ್ನು ವ್ಯಕ್ತಪಡಿಸಿದ್ದಾರೆ. ಈ ಭಾಷೆಯ ಹುಟ್ಟು, ಅದರ ಅಭಿವೃದ್ಧಿ, ಶಾಯಿರಿಗಳ ಕಾಲ, ನವ್ಯದತ್ತ ಅದು ಹೊರಳಿದುದು, ಅದು ಭಾರತದ ಸಾಹಿತ್ಯವನ್ನು ಶ್ರೀಮಂತಗೊಳಿಸಿದುದು, ರಾಷ್ಟ್ರದ ಸ್ವಾತಂತ್ರ್ಯದಲ್ಲಿ ಉರ್ದುವಿನ ಪಾತ್ರ ಈ ಎಲ್ಲಾ ವಿಷಯಗಳ ಕುರಿತ ಸಂಪೂರ್ಣವಾದ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.