"ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೇಜ್ ಕಥೆಗಳು" ಲೇಖಕ ಎಸ್. ಗಂಗಾಧರಯ್ಯ ಅವರ ಲೇಖನಗಳ ಸಂಕಲನ. ಬರೆಯುವ ಬದುಕಿನಲ್ಲಿ ಏಕತಾನತೆ, ಕೃತಕತೆಯ ಸೋಂಕು ತಾಗಿಸಿಕೊಳ್ಳದಿರುವುದು, ತಾಜಾ ಬದುಕೊಂದು ಓದುಗನೊಳಗೆ ಅನುಭವವಾಗಿ ಅನುರಣಿಸುವಂತೆ ಮಾಡುವುದು ಹಾಗೂ ವಾಸ್ತವದ ಸತ್ಯಗಳಿಗೆ ಮುಖಾಮುಖಿಯಾಗುವುದು-ನಿಜ ಲೇಖಕನೊಬ್ಬನ ಮುಖ್ಯ ಸಾಮಾಜಿಕ ಜವಾಬ್ದಾರಿ ಅನ್ನುವಂತೆ ಬರೆದು ಬದುಕಿದವನು ಮಾರ್ಕೇಜ್.ಅವರ ಬಗೆಗಿನ ಕಥಾಸಂಕಲನವೇ ಈ ಪುಸ್ತಕ.
ಎಸ್. ಗಂಗಾಧರಯ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕಳ್ಳಿಯವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮತಿಘಟ್ಟದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಪ್ರಕಟಿತ ಕೃತಿಗಳು ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಗಿವೆ. ನವಿಲ ನೆಲ, ಒಂದು ಉದ್ದನೆಯ ನೆರಳು, ಇವರ ಕಥಾ ಸಂಕಲನಗಳು. ’ಬಯಲ ಪರಿಮಳ’ ಎಂಬ ವ್ಯಕ್ತಿಚಿತ್ರ ಸಂಪುಟವನ್ನು ರಚಿಸಿದ್ದಾರೆ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ,- ಎರ್‍ಮಾ, ವಿವಿಧ ಲೇಖಕರ ಕತೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಇವುಗಳನ್ನು ಕನ್ನಡೀಕರಿಸಿದ್ದಾರೆ. ಕುವೆಂಪು ಭಾಷಾಭಾರತಿಗಾಗಿ ...
READ MORE