‘ವಿಮುಕ್ತೆ’ ಓಲ್ಗಾ ಕಥೆಗಳ ಕನ್ನಡಾನುವಾದ. ಜಿ. ವೀರಭದ್ರಗೌಡ ಅವರು ತೆಲುಗಿನ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಭಿನವದ ಒಂದು ಸಂಚಿಕೆ ತೆಲುಗಿನ ಪ್ರಸಿದ್ಧ ಕತೆಗಾರ್ತಿ ಶ್ರೀಮತಿ ಓಲ್ಗಾರ “ವಿಮುಕ್ತಿ' ಕಥಾ ಸಂಕಲನದ ಅನುವಾದವಾಗಿತ್ತು. ಆದರೆ, ಅದು ಕೇವಲ ಅನುವಾದ ಮಾತ್ರವಾಗಿರದೆ; ಆ ಕಥೆಗಳ ಕುರಿತ ಮಾತುಕಥೆಯೂ ಆಗಿತ್ತು. ಇಲ್ಲಿ ಪುರಾಣ ಪರಂಪರೆಯ ವಿಷಯವನ್ನೇ ಆರಿಸಿಕೊಂಡರೂ ಸಹ ಆ ಪಾತ್ರಗಳನ್ನು ನೋಡುವ ಕಣ್ಣು ಭಿನ್ನವಾಗಿದೆ ಮತ್ತು ಹೆಚ್ಚು ಮಾನವೀಯವಾಗಿದೆ.
ತೆಲುಗು ಮತ್ತು ಕನ್ನಡದ ವಿದ್ವಾಂಸರು ಕಥೆಗಳನ್ನು ಕುರಿತು ನಡೆಸಿರುವ ಮುಖಾಮುಖಿಯೂ ಇಲ್ಲಿದೆ. ನಮ್ಮ ಮನಸ್ಸಿನ ಜೊತೆಗೆ, ಪರಂಪರೆಯ ಜೊತೆಗೆ, ನಮ್ಮ ನಂಬಿಕೆಗಳ ಜೊತೆಗೆ ಹಾಗೂ ಸಾಹಿತ್ಯದ, ಧರ್ಮದ, ಸಮಾಜದ ಗ್ರಹಿಕೆಗಳ ಜೊತೆಗಿನ ಮುಖಾಮುಖಿ. ಹೀಗಾಗಿ, ಈ ಕೃತಿ ಹಲವು ಆಯಾಮಗಳ ಕಡೆಗೆ ಚಲಿಸುವಂಥದು.
©2024 Book Brahma Private Limited.