ವಿಶ್ವ ಖ್ಯಾತಿಯ ಸಾಹಿತಿ, ಕಾದಂಬರಿಕಾರ ಆಂಟನಿ ಚೆಕೋವ್ ಅವರ ‘ಲಾಟರಿ ಟಿಕೆಟ್ ಮತ್ತು ಇತರ ಕಥೆಗಳು’ ಕೃತಿಯನ್ನು ಲೇಖಕ ಟಿ.ಎಸ್. ರಘುನಾಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸೂಕ್ಷ್ಮ ಸಂವೇದನೆಗಳ ಮೂಲಕ ಬಡತನದ ಮುಗ್ಧತೆ, ಸಿರಿತನದ ಅಹಂ, ವ್ಯವಸ್ಥೆಯ ಕರಾಳತೆ, ಬದುಕಿನ ಸವಾಲುಗಳನ್ನು, ಮಾನವೀಯತೆಯನ್ನು ಹೀಗೆ ಹತ್ತು ಹಲವು ಪದರುಗಳಲ್ಲಿ ಚಿಂತಿಸಿ, ಅವನ್ನು ಸಾಹಿತ್ಯ ಕೃತಿಗಳ ಮೂಲಕ ಓದುಗರ ಚಿಂತನೆಯನ್ನು ಪ್ರಚೋದಿಸಿ-ಪ್ರೇರೇಪಿಸಿದ ಬರಹಗಾರ ಆಂಟನಿ ಚೆಕೋವ್. ಇಲ್ಲಿಯ ಎಲ್ಲ ಕಥೆಗಳು ತಮ್ಮ ಸೂಕ್ಷ್ಮ ಸಂವೇದನಾಭರಿತ ಕಾಣ್ಕೆಗಳಿಂದಾಗಿ ಓದುಗರ ಮನ ಸೆಳೆಯುತ್ತವೆ. ಅನುವಾದವೂ ಸಹ ಮೂಲಕ್ಕೆ ಧಕ್ಕೆಯಾಗದ ಹಾಗೆ ಎಚ್ಚರ ವಹಿಸಿದೆ.
ಲೇಖಕ, ಅನುವಾದಕ ಟಿ.ಎಸ್. ರಘುನಾಥ್ ಅವರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲೂಕಿನ ತುರುವನೂರಿನವರು. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು, ನಗರದ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1985ರಿಂದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು ಮಲ್ಲೇಶ್ವರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ಸ್ನಾತಕೋತ್ತರ ಸ್ಥಾಪಕ ಸಂಯೋಜಕರಾಗಿ ಕಾರ್ಯನಿರ್ವಹಿಸಿ 2014ರಲ್ಲಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆ ಬಹು ಮುಖ್ಯವಾಗಿ ಕಥನ ಪರಂಪರೆ ಮತ್ತು ಸಂಶೋಧನಾ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರುವ ಅವರು ಪಾಶ್ಚಾತ್ಯ ಸಾಹಿತ್ಯ ಅದರಲ್ಲೂ ರಷ್ಯನ್ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ನಿವೃತ್ತಿಯ ನಂತರ ...
READ MORE