ಖ್ಯಾತ ಚಿಂತಕ -ಸಾಹಿತಿ ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರ ಸಂಪಾದಿತ ಕೃತಿ-ಗೆಲಿವರನ ದೇಶ ಸಂಚಾರ. ಎಸ್.ಜಿ. ನರಸಿಂಹಾಚಾರ್ಯರು ಈ ಕೃತಿಯ ಲೇಖಕರು. ಗಲಿವರ್ಸ್ ಟ್ರಾವಲ್ಸ್ -ಕೃತಿಯು ಮಕ್ಕಳಿಗಂತೂ ಅತ್ಯದ್ಭುತ. ಈ ಕೃತಿ ಮಕ್ಕಳ ಪುಸ್ತಕವಾಗಿಯೇ ಪ್ರಖ್ಯಾತಿ ಪಡೆದಿದೆ. ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯ ಪ್ರಥಮ ಪ್ರಯಾಣದ ಕಥೆಯನ್ನು ಎಸ್.ಜಿ.ನರಸಿಂಹಾಚಾರ್ಯರು ಗಲಿವರನ ದೇಶಸಂಚಾರ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ (1900). ಗಲಿವರ್ ಎಂಬ ಹಡಗು ವೈದ್ಯನೊಬ್ಬ ನಾಲ್ಕು ಅಪರಿಚಿತ ಸ್ಥಳಗಳಿಗೆ ಕೈಗೊಂಡ ಸಮುದ್ರಯಾನದ ಕಥೆಯನ್ನು ಬಲು ಸ್ವಾರಸ್ಯವಾಗಿ ವರ್ಣಿಸುತ್ತದೆ. ಮೊದಲ ಪ್ರಯಾಣದಲ್ಲಿ ಆತ ಲಿಲಿಪುಟಿಯನ್ಸ್ ದ್ವೀಪಕ್ಕೆ, ಎರಡನೆಯ ಪ್ರಯಾಣದಲ್ಲಿ ಬ್ರಾಬ್‍ಡಿಂಗ್‍ನಾಗ್ ಎಂಬ ದೈತ್ಯರ ನಾಡಿಗೆ, ಮೂರನೆಯ ಪ್ರಯಾಣದಲ್ಲಿ ಮೂರ್ಖರ ದಡ್ಡರ ಕೆಲವು ರಾಜ್ಯಗಳಿಗೆ, ನಾಲ್ಕನೆಯ ಪ್ರಯಾಣದಲ್ಲಿ ಪ್ರಾಣಿಗಳ ನಾಡಿಗೆ ಭೇಟಿಕೊಡುತ್ತಾನೆ. ಮೂರನೆಯ ಹಾಗೂ ನಾಲ್ಕನೆಯ ಪ್ರಯಾಣದ ಕಥೆಯಲ್ಲಿ ಸ್ವಿಫ್ಟ್ ತನ್ನ ಸಮಕಾಲೀನ ಸಮಾಜವನ್ನು ವಿಡಂಬಿಸಿದ್ದಾನೆಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.
©2025 Book Brahma Private Limited.