ಮಹಾಕವಿ ಸೋಮದೇವಭಟ್ಟನ ಕಥಾಸರಿತ್ಸಾಗರದ ಅನುವಾದದ ಮಾಲಿಕೆಯಲ್ಲಿನ ಮೊದಲ ಸಂಪುಟವಾಗಿದೆ ಇದು. ಮೂಲದ ಮೊದಲ ಲಂಬಕವು ಈ ಸಂಪುಟದ ಕಥಾವಿಷಯವಾಗಿದೆ. ಇದರಲ್ಲಿ ವರರುಚಿ, ವ್ಯಾಡಿ ಇಂದ್ರದತ್ತ, ಬ್ರಹ್ಮದತ್ತ, ಮಯಾಸುರನ ಮಕ್ಕಳು, ಪಾಣಿನಿ, ಆದಿತ್ಯವರ್ಮ, ಗುಣಾಢ್ಯ, ಸಾತವಾಹನ, ಶಿಬಿ ಇವರ ಕಥೆಗಳ ಜೊತೆಗೆ ಬೃಹತ್ಕಥೆಯ ಕಥೆಯನ್ನು ಕೂಡ ಈ ಕೃತಿ ಒಳಗೊಂಡಿದೆ. ತನ್ನ ಕೃತಿಯ ಬಹುಭಾಗವನ್ನು ನಿರಾಶೆಯಿಂದ ಸುಟ್ಟು, ರಾಜ ಸಾತವಾಹನನ ಕೋರಿಕೆಯ ಮೇರೆಗೆ ಕಡೆಯ ಒಂದು ಲಕ್ಷ ಶ್ಲೋಕಗಳನ್ನುಳ್ಳ ನರವಾಹನದತ್ತನ ಕಥೆಯನ್ನು ಅವನಿಗೆ ಕೊಡುತ್ತಾನೆ. ಈ ಎಲ್ಲಾ ವಿಷಯಗಳ ಕುರಿತು ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.
©2024 Book Brahma Private Limited.