‘ಕಸಿ ಮಾವು- ಅನುವಾದಿತ ಕಥೆಗಳು 2014’ ಲೇಖಕಿ ಡಾ.ಎಚ್.ಎಸ್. ಅನುಪಮಾ ಅವರ ಸಂಪಾದಿತ ಕೃತಿ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಆಯಾ ವರ್ಷ ಕನ್ನಡದಲ್ಲಿ ಬಿಡಿಯಾಗಿ ಪ್ರಕಟಣೆಗೊಳ್ಳುವ ಇಲ್ಲವೇ ಸಿದ್ಧಗೊಳ್ಳುವ ಅನುವಾದಗಳ ಪ್ರಾತಿನಿಧಿಕ ಸಂಕಲನಗಳನ್ನು ಹೊರತರುವ ಯೋಜನೆಯನ್ನು ರೂಪಿಸಿಕೊಂಡಿದ್ದು, ಆ ಯೋಜನೆಯಡಿಯಲ್ಲಿ 2014ರಲ್ಲಿ ಹೀಗೆ ಅನುವಾದಗೊಂಡ ಬೇರೆ ಭಾಷೆಯ ಕಥೆಗಳ ಸಂಕಲನವೊಂದನ್ನು ಅನುಪಮಾ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿ ಓದಲು ಸಿಗುವ ಕಥೆಗಳ ವ್ಯಾಪಕತೆ ಕಣ್ಣಿಗೆ ಕಾಣುವಂತಿದೆ. ಹಾಗೆಯೇ, ಹೊಸ ತಲೆಮಾರಿನ ಅನುವಾದಕರ ಪರಿಚಯವೂ ಇಲ್ಲಿದ್ದು, ಕನ್ನಡದ ಸಂವೇದನೆ ಸೂಕ್ಷ್ಮಗೊಳ್ಳುತ್ತಾ ಹೋಗುತ್ತದೆಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE