ಲೇಖಕ ಅಲೋಕ್ ಭಲ್ಲಾ ಅವರು 1993 ರಲ್ಲಿ ಸಂಕಲಿಸಿದ್ದ 46 ಕತೆಗಾರರ ಬೃಹತ್ ಸಂಪುಟವು ಆರ್.ಕೆ. ಹುಡಗಿ (ರಾಹು) ಅವರಿಂದ ಅನುವಾದಿತಗೊಂಡು ಕನ್ನಡದಲ್ಲಿ ಧರೆಹೊತ್ತಿ ಉರಿದಾಗ ಎಂಬ ಹೆಸರಿನ ಮೂರು ಭಾಗಗಳಲ್ಲಿ ಪ್ರಕಟಗೊಂಡಿದೆ.
ಅಲೋಕ್ ಭಲ್ಲಾ ಸಂಪಾದಿಸಿರುವ ’ಧರೆಹೊತ್ತಿ ಉರಿದಾಗ’ ಭಾರತ ವಿಭಜನೆಯ ದುರಂತ ಕಥೆಗಳಿವೆ. ಅಶ್ಫಾಕ್ ಅಹ್ಮದ್, ನರೇಂದ್ರನಾಥ ಮಿತಾ, ಸಾದತ್ ಹಸನ್ ಮಾಂಟೋ, ಎಸ್. ಎಚ್. ವಾತ್ಸಾಯನ ಅಜ್ಞೇಯ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗಿದೆ.
ಗಾಳಿ ಬಿತ್ತಿ ಬಿರುಗಾಳಿ ಬೆಳೆದವರು, ನಿಯತ್ತು, ಪ್ರತೀಕಾರ, ಮನೆ-ಮಾಲೀಕ, ಡ್ರೆಸ್ಸಿಂಗ್ ಟೇಬಲ್, ಹಿಂಡನ್ನಗಲಿದ ಹಕ್ಕಿಗಳು, ಲಾಜವಂತಿ, ಬೆಲೆ ಹುಡುಕಿ ಹೋದರು, ನೆಲೆಯೂ ಕಳೆದುಕೊಂಡರು, ತಣ್ಣನೆಯ ಮಾಂಸ, ಭಾರತದಿಂದ ಒಂದು ಪತ್ರ, ಜನಸೇವಕ, ಪಾಕಿಸ್ತಾನದ ಆಗಂತುಕ ಹೀಗೆ ಸುಮಾರು 22 ಕತೆಗಳನ್ನು ಮೊದಲ ಭಾಗ ಒಳಗೊಂಡಿದೆ.
©2024 Book Brahma Private Limited.