ಲೂಷನ್ ಅವರ ಆಯ್ದ 10 ಚೀನಿ ಕಥೆಗಳು

Author : ವಿಜಯಾ ಸುಬ್ಬರಾಜ್

Pages 152

₹ 150.00




Year of Publication: 2018
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

1881 – 1936 ರ ನಡುವಿನಲ್ಲಿ ಬದುಕಿದ್ದ ಲುಷನ್ ಚೀನಾದ ಅತ್ಯಂತ ಪ್ರಭಾವಿ ವ್ಯಕ್ತಿ, ಚಿಂತಕ, ಕ್ರಾಂತಿಕಾರಿ. ಲುಷನ್ ಚೀನಾ ಸಂಸ್ಕೃತಿಗೆ ತನ್ನ ಸಾಹಿತ್ಯವನ್ನು ಪರಿಚಯಿಸಿದವನು. 

ದುಗುಡ, ಒಂಟಿತನ, ಹತಾಶೆ, ಇತ್ಯಾದಿ ಸಂದರ್ಭಗಳಲ್ಲಿ ತನ್ನ ಬದುಕಿನ ಅನುಭವದ ಕಣಗಳನ್ನು , ಭೇಟಿಯಾಗುತ್ತಿದ್ದ ವ್ಯಕ್ತಿಗಳನ್ನು, ಕತೆಯಾಗಿಸುವ ಪ್ರಯತ್ನದಲ್ಲಿ ಲುಷನ್ ತನ್ನನ್ನು ತಾನು ತೊಡಗಿಸಿಕೊಂಡ.

ಲುಷನ್ ಕತೆಗಳಲ್ಲಿ ಕಾಣುವ ಸರಳತೆ, ವಾಸ್ತವತೆ, ಆಪ್ತತೆ, ಪ್ರಾಮಾಣಿಕತೆಗಳು ವೈಶಿಷ್ಟಗಳಾಗಿವೆ. ಇವನ ಹತ್ತು ಚೀನಿ ಕಥೆಗಳಲ್ಲಿ ಕಾಣಬಹುದು.

ವಿಚ್ಛೇದನ, ಹುಚ್ಚನ ದಿನಚರಿ, ಮೆಡಿಸನ್, ನಾಳೆ, ಒಂದು ಘಟನೆ, ಚಹದ ಬಟ್ಟಲಲ್ಲಿ ಬಿರುಗಾಳಿ,ಸುಖೀ ಸಂಸಾರ, ನನ್ನ ಹಳೆಮನೆ, ಆಹ್ ಕ್ಯೂನ್ ನೈಜ ಕತೆ, ಚಂದ್ರನೆಡೆಗೆ ಕತೆಗಳು ಡಾ. ವಿಜಯಾ ಸುಬ್ಬರಾಜ್  ಅವರ ಕನ್ನಡ ಅನುವಾದದಲ್ಲಿ ಮೂಡಿಬಂದಿದೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books