ಪಾಪಿಯ ಪಶ್ಚಾತ್ತಾಪ

Author : ಬಸವರಾಜ ಪಿ. ಡೋಣೂರ

Pages 80

₹ 70.00




Year of Publication: 2005
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವೈಯಾಲಿಕಾವಲ್, ಬೆಂಗಳೂರು- 560003
Phone: 23313400

Synopsys

‘ಪಾಪಿಯ ಪಶ್ಚಾತ್ತಾಪ’ ಪ್ರಪಂಚದ ಅತ್ಯುತ್ತಮ ಸಣ್ಣಕಥೆಗಳ ಸಂಪುಟ-1. ಡಾ. ಬಸವರಾಜ ಡೋಣೂರರ ಸಂಪಾದಕತ್ವದಲ್ಲಿ ಸಂಗ್ರಹಿತವಾಗಿದೆ. 12 ಕಥೆಗಳಿವೆ. ಇವು ಬರಹಗಾರನ ಮನಸ್ಸಿನ ತುಮುಲಗಳ ಪ್ರತಿಫಲನಗಳು.

ಸಂಪಾದಕರೇ ಬರೆದಿರುವಂತೆ ಇಲ್ಲಿಯ ಸಣ್ಣಕತೆಗಳು ಭಾವಗೀತೆಯ ತೀವ್ರತೆ, ಅದ್ಭುತ ಬಂಧ, ನವಿರತೆ ಎಲ್ಲವನ್ನೂ ಮೈಗೂಡಿಸಿಕೊಂಡಿವೆ. ಆ್ಯಂಟನ್ ಚಿಕಾಫ್. ಓ ಹೆನ್ರಿ, ಸಾಮರಸೆಟ್ ಮಾಮ್, ಪ್ರೇಮಚಂದ, ಶರಚ್ಚಂದ್ರ ಚಟರ್ಜಿ, ಮಹಾದೇವಿ ವರ್ಮಾ, ಲಿಯೋ ಟಾಲ್‌ಸ್ಟಾಯ್, ಮದೇವ ಸಿಂಹ, ತಸ್ಲಿಮ್ ಮತ್ತು ಖಾಜಾ ಅಹಮದ್ ಅಬ್ಬಾಸ್ಹೀಗೆ ವಿಶ್ವದ ಹಲವು ದೇಶಗಳ, ಭಾಷೆಗಳ ವಿವಿಧ ಕಾಲಘಟ್ಟಗಳ, ವಿಷಯ ವಸ್ತುಗಳ ಲೇಖಕರ ಕಥೆಗಳನ್ನು ಅಷ್ಟೇ ಭಿನ್ನ ಸಾಮಾಜಿಕ, ಭಾಷಿಕ ವೃತ್ತಿಯ ಭಿನ್ನತೆಯ ಅನುವಾದಕರಿಂದ ಅನುವಾದಿಸಲ್ಪಟ್ಟಿವೆ.  ಒಬ್ಬ ಬರಹಗಾರ ತನ್ನ ಜೀವಮಾನದುದ್ದಕ್ಕೂ ನೂರು ಕೃತಿಗಳನ್ನು ಬರೆದರೂ ಆತ ಮತ್ತೆ ಮತ್ತೆ ಒಂದು ವಿಷಯವನ್ನು ಕುರಿತು ಬರೆಯುತ್ತಾನೆ. ಹಾಗೆಯೇ ವಿಶ್ವದ ಅನೇಕ ಕಥೆಗಾರರು ಯಾವುದೇ ಕಾಲ, ದೇಶಗಳ ಅಂತರದಲ್ಲಿ ಕುಳಿತು ಬರೆದಿದ್ದರೂ ಕೂಡಾ ಬರಹಕ್ಕೊಳಪಡಿಸಿದ ಅಥವಾ ಬರಹದ ಮೂಲಕ ಬಗೆ ಹರಿಸಲು ಯತ್ನಿಸಿದ ಸಮಸ್ಯೆಯೊಂದೆ ಎನ್ನಲು ಈ ಸಂಕಲನ ಉತ್ತಮ ಸಾಕ್ಷಿಯಾಗಿದೆ.

About the Author

ಬಸವರಾಜ ಪಿ. ಡೋಣೂರ
(26 July 1969)

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...

READ MORE

Related Books