‘ಒಂದು ಮರ ನೂರು ಸ್ವರ’ ಕೃತಿಯು ಎನ್.ಎಸ್. ಶಾರದಾಪ್ರಸಾದ್ ಅವರ ಸಣ್ಣ ಕತೆಗಳ ಸಂಕಲವಾಗಿದೆ. ಇಲ್ಲಿ ಲೇಖಕ ತಮ್ಮ ಬರವಣಿಗೆಯ ಬದುಕಿನುದ್ದಕ್ಕೂ ಆಯ್ದು ಪೋಣಿಸಿದ ಅನುವಾದಿತ ಕತೆಗಳನ್ನು ಕಾಣಬಹುದು. 1981 ರಿಂದ ಆರಂಭಿಸಿ 2014ರ ತನಕದ ಮೂರು ದಶಕದ ಅವರ ಎಲ್ಲಾ ಅನುವಾದಿತ ಕತೆಗಳು ಇಲ್ಲಿವೆ. ಇಲ್ಲಿನ ಕತೆಗಳ ಹಿಂದೆ ಶಾರದಾ ಪ್ರಸಾದರ ಸೂಕ್ಮ್ಷತೆ, ಭಾವುಕತೆ ಎದ್ದು ತೋರುತ್ತದೆ. ಭಾರತೀಯ ಭಾಷೆಯಲ್ಲಿ ಸಣ್ಣ ಕತೆಗಳನ್ನು ಬರೆದ ದೊಡ್ಡ ಲೇಖಕರು, ಹೆಚ್ಚು ಪರಿಚಿತರಲ್ಲದವರೂ ಈ ಸಂಕಲನದಲ್ಲಿ ಜಾಗ ಪಡೆದಿದ್ದಾರೆ.
ಪಿ. ನಂದಕುಮಾರ್ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವ ಅವರ ಲೇಖನ, ವಿಮರ್ಶೆ, ಕವಿತೆಗಳು ಬುಕ್ ಬ್ರಹ್ಮ ಸೇರಿದಂತೆ ಹಲವು ಸಾಹಿತ್ಯಿಕ ವೆಬ್ ಸೈಟ್, ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...
READ MORE