`ಟಿಕೆಟ್ ಪ್ಲೀಸ್’ ವಿಕ್ರಂ ಚದುರಂಗ ಅವರ ಅನುವಾದಿತ ಕತೆಗಳಾಗಿವೆ. ಈ ಕೃತಿಯಲ್ಲಿ ಐದು ಕತೆಗಳಿದ್ದು, ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ಒಗ್ಗಿಸುವ ಅನುವಾದದ ಪ್ರಯತ್ನವಿಲ್ಲಿದೆ. ಇಲ್ಲಿನ ಟಿಕೆಟ್ ಪ್ಲೀಸ್ ಲಾರೆನ್ಸನ ಪ್ರಸಿದ್ಧ ಕತೆಯಾಗಿದ್ದು, ಹಲವಾರು ಭಾಷೆಗಳಿಗೂ ಕೂಡ ಅನುವಾದಗೊಂಡಿದೆ. ಮೊದಲ ಮಹಾಯುದ್ಧಾನಂತರದ ಕಾಲದಲ್ಲಿ ಈ ಕಥೆ ನಡೆಯುವಾಗಿನ ಯುರೋಪಿನ ಪಟ್ಟಣದ ಸ್ಥಿತಿಗತಿಗಳು, ಅಲ್ಲಿ ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗಳು, ಯುದ್ಧಾನಂತರದ ಯುವಕರ ಕೊರೆತಯಿಂದಾಗಿ ಕೆಲಸ, ಕೈಗಾರಿಕೆ, ನಗರ ವ್ಯವಸ್ಥೆ ಇತ್ಯಾದಿಗಳಲ್ಲಿ ಉಂಟಾದ ಬದಲಾವಣೆಗೆ ತೆರೆದುಕೊಳ್ಳುತ್ತ ಹೋದ ಸ್ತ್ರೀಯರ ವೃತ್ತಿ ವೈವಿಧ್ಯಗಳು ಮತ್ತು ಈ ಬದಲಾವಣೆಗಳು ಹೊಸಕಾಲದ ಯುವತಿಯರಿಗೆ ತಂದುಕೊಟ್ಟ ವಿಶ್ವಾಸದ ಮನಸ್ಥಿತಿಯಲ್ಲಿ ಇವುಗಳೆಲ್ಲದರ ಮೂಲಕ ನಗರದಲ್ಲಿ ಚಲಿಸುವ ಟ್ರಾಮುಗಳಲ್ಲಿ ಕಂಡಕ್ಟರುಗಳಾದ ಯುವತಿಯರ ಕಥೆಯನ್ನು, ಅವರನ್ನು ಏಮಾರಿಸಿ, ಸಿಕ್ಕಿಹಾಕಿಕೊಳ್ಳುವ ಗಂಡು ಹಮ್ಮಿನ ಯುವ ಇನ್ಸ್ ಪೆಕ್ಟರಿನ ಕಥೆಯನ್ನು ಲಾರೆನ್ಸ್ ಹೇಳುತ್ತಾನೆ. ಒಟ್ಟಾರೆಯಾಗಿ ಈ ಕತೆಯಲ್ಲಿ ಅನ್ಶಿಯ ಮನಸ್ಸಿನ ನೋವು ಸಹೃದಯರನ್ನು ಕಾಡುತ್ತದೆ.
‘ಕೊನೆ ಎಲೆ’ ಕಥೆಯಲ್ಲಿ ಕಲಾವಿದನೊಬ್ಬನ ಮಹಾನ್ ಕಲಾಕೃತಿಯನ್ನು ಸೃಷ್ಟಿಸಿ ಅದರ ಮೂಲಕ ಸಾಯುವಂತಹ ಜೀವ ಒಂದಕ್ಕೆ ಬದುಕಬೇಕು ಎಂಬ ಆತ್ಮವಿಶ್ವಾಸವನ್ನು ತುಂಬಿದ ಸಾರ್ಥಕ ಕಥೆಯಾಗಿದೆ. ‘ಖುಷಿ ರಾಜಕುಮಾರ’ ಕಥೆಯಲ್ಲಿ ಚಿಕ್ಕ ಪಕ್ಷಿ ಮತ್ತು ರಾಜಕುಮಾರ ತಮ್ಮ ಚಟುವಟಿಕೆಗಳ ಮೂಲಕ ದೇವರಿಗೆ ಪ್ರಿಯರಾಗುತ್ತಾರೆ ಎನ್ನುವುದನ್ನು ತಿಳಿಸಲಾಗಿದೆ. ‘ಕನಸು’ ಕಥೆಯು ಪ್ರೀತಿ, ಪ್ರೇಮ, ಆದರ್ಶ, ತ್ಯಾಗ ಇಂತಹ ಸೂಕ್ಷ್ಮಭಾವನೆಗಳೂ ಕಥೆಗಳಲ್ಲಿ ಕಲಾತ್ಮಕವಾಗಿ ಅನಾವರಣಗೊಂಡಿವೆ.
ವಿಕ್ರಂ ಚದುರಂಗ ಅವರು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಶೈಕ್ಷಣಿಕ ಡೀನ್ ಮತ್ತು ಹಿರಿಯ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಅಪಾರ ಪಾಂಡಿತ್ಯವಿದ್ದು, ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಮೂರು ಕೃತಿಗಳನ್ನು ಅನುವಾದಿಸಿದ್ದಾರೆ. 'ಆನ್ ಆಂಥಾಲಜಿ ಆಫ್ ಕನ್ನಡ ಶಾರ್ಟ್ ಸ್ಟೋರೀಸ್ ಇನ್ ಇಂಗ್ಲಿಷ್', 'ದಲಿತ ಎಕ್ಸ್ಪೀರಿಯೆನ್ಸ್: ಕನ್ನಡ ಶಾರ್ಟ್ ಸ್ಟೋರಿಸ್ ಇನ್ ಇಂಗ್ಲಿಷ್' ಮತ್ತು ‘ಫ್ರಾಮ್ ಮಾಸ್ತಿ ಟು ಮಹದೇವ. ಇಂಗ್ಲಿಷ್‌ನಲ್ಲಿ ‘ಆನ್ ಆಂಥಾಲಜಿ ಆಫ್ ಕನ್ನಡ’, ‘ಶಾರ್ಟ್ ಸ್ಟೋರಿಸ್ ಇನ್ ಇಂಗ್ಲಿಷ್ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನ ಲೇಖನಗಳನ್ನು ಮಂಡಿಸಿದ್ದಾರೆ. ಚಿನುವ ಅಚಿಬೆ ...
READ MORE