‘ಯುಗದ ಹೆಜ್ಜೆ’ ಹಿಂದಿ ಲೇಖಕಿಯರ ಸಣ್ಣ ಕತೆಗಳ ಕನ್ನಡಾನುವಾದ. ಡಾ. ಎಂ.ಎಸ್. ವೀರಘಂಟಿ ಮಠ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಸುಭದ್ರಾ ಕುಮಾರಿ ಚೌಹಾಣ, ಶಿವಾನಿ, ಕೃಷ್ಣಾ ಸೋಬತಿ, ಮನ್ನೂ ಭಂಡಾರಿ, ಮಾಲತಿ ಜೋಶಿ, ಮಂಜುಲ್ ಭಗತ್, ಮೃದುಲಾ ಗರ್ಗ್, ನಾಶಿರಾ ಶರ್ಮಾ, ಮಮತಾ ಕಾಲಿಯಾ, ಸೂರ್ಯ ಬಾಲಾ, ಚಿತ್ರಾ ಮುಗ್ದಲ್ ಮೊದಲಾದ ಪ್ರಮುಖ ಕತೆಗಾರ್ತಿಯರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ.
ಹಿರಿ-ಕಿರಿಯರ ಕತೆಗಳು ಈ ಸಂಕಲನದಲ್ಲಿವೆ. ಇಲ್ಲಿರುವ ಬಹುತೇಕ ಕತೆಗಳು ಭಾರತದ ಹೆಣ್ಣು ಸಾಗಿ ಬಂದ ಹಾದಿಯನ್ನು ತೆರೆದಿಡುತ್ತವೆ. ಮಹಿಳಾ ಸಾಹಿತ್ಯದ ಬೆಳವಣಿಗೆಯ ಜೊತೆಗೆ ಸ್ತ್ರೀವಾದ ಹೇಗೆ ಹಿಂದಿ ಸಾಹಿತ್ಯದಲ್ಲಿ ಕತೆಗಾರರಿಂದ ಕತೆಗಾರರಿಗೆ ಭಿನ್ನವಾಗಿ ವಿಸ್ತಾರಗೊಳ್ಳುತ್ತಾ ಹೋಯಿತು ಎನ್ನುವುದನ್ನು ಈ ಕೃತಿ ತಿಳಿಸಿಕೊಡುತ್ತದೆ.
©2024 Book Brahma Private Limited.