‘ಮನ ಮೆಚ್ಚಿದ ಹುಡುಗಿ’ ಕನ್ನಡಕ್ಕೆ ಬಂದ ಪರದೇಶೀ ಕತೆಗಳು ರೋಹಿತ್ ಚರ್ಕತೀರ್ಥ ಅವರ ಅನುವಾದಿತ ಕತೆಗಳು. ಈ ಕೃತಿಗೆ ಹಿರಿಯ ವಿಮರ್ಶಕ ಅರವಿಂಡ ಚೊಕ್ಕಾಡಿ ಅವರು ಬೆನ್ನುಡಿ ಬರೆದಿದ್ದಾರೆ. ರೋಹಿತ್ ಅವರ ರಚನಾಕ್ರಮ ವಿಶಿಷ್ಟ ಅವರ ಮನ ಮೆಚ್ಚಿದ ಹುಡುಗಿಯಲ್ಲಿ ಕನ್ನಡಕ್ಕೆ ಈಗಾಗಲೇ ಪರಿಚಿತರಾಗಿರುವ ಟಾಲ್ ಸ್ಟಾಯ್. ಓ ಹೆನ್ರಿ, ಆರ್ಥರ್ ಕಾನನ್ ಡಾಯ್ಸ್ , ರೋ ಆಲ್ಡ್ ಡಾಹ್ಲ್ ಜೊತೆಗೆ ಹೊಸಬರೆನ್ನಿಸುವ ಪೀಟರ್ ಬಿಷಲ್, ಡಗ್ಲಾಸ್ ಆಡಮ್ಸ್, ಹರುಕಿ ಮುರಕಮಿ ಮುಂತಾದವರ ಕತೆಗಳಿವೆ. ಈ ಕತೆಗಳ ಅನುವಾದವು ಕೇವಲ ಭಾಷಾನುವಾದ ಮತ್ತು ಭಾವಾನುವಾದಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಸನ್ನಿವೇಶಗಳ ಅನುವಾದವೂ ಆಗಿದೆ ಎನ್ನುತ್ತಾರೆ ಅರವಿಂದ ಚೊಕ್ಕಾಡಿ.
ಮೂಲ ಲೇಖಕ ತನ್ನ ಊರಿನ ಯಾವುದೋ ಗಲ್ಲಿಯ ಹೆಸರನ್ನು ಬರೆದಿದ್ದರೆ ರೋಹಿತ್ ಅವರು ಬೆಂಗಳೂರಿನ ಯಾವುದೋ ಗಲ್ಲಿಯ ಹೆಸರನ್ನು ಹೇಳುತ್ತಾರೆ. ಸಾಮಾನ್ಯವಾಗಿ ಅನುವಾದದಲ್ಲಿ ಭಾಷೆ ಮತ್ತು ಭಾವದ ಗ್ರಹಿಕೆ ಎಷ್ಟು ಸಮರ್ಥತೆಯಿಂದ ಬಂದಿದೆ ಎನ್ನುವುದೇ ಹೇಳಬೇಕಾಗಿರುವ ಅಂಶವಾಗಿರುತ್ತದೆ. ಆದರೆ ಇಲ್ಲಿ ಅನುವಾದಕರು ಸ್ವತಂತ್ರ ಶಕ್ತಿ ಕೂಡಾ ಹೇಗೆಲ್ಲ ಕೆಲಸ ಮಾಡಿದೆ ಎಂದು ಕಂಡುಕೊಳ್ಳಬೇಕಾದ ಸಂಗತಿಗಳಿವೆ.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE