'ಮೋಹನದಾಸʼನೀಳ್ಗತೆಯು ಕನ್ನಡಕ್ಕೆ ಅನುವಾದಿಸಿದ ಕೃತಿಯಾಗಿದ್ದು ಉದಯ ಪ್ರಕಾಶ್ ಅವರು ರಚಿಸಿದ್ದು ಇದರ ಕನ್ನಡನುವಾದವನ್ನು ಆರ್.ಪಿ. ಹೆಗಡೆ ಮಾಡಿದ್ದಾರೆ. ಇಲ್ಲಿ ಮನುಷ್ಯ ವರ್ತನೆಯ ದ್ವಂದ್ವ, ಗೊಂದಲ, ಮುಗ್ಧತೆ, ಕ್ರೌರ್ಯಗಳನ್ನು ಒಂದೆಡೆ ಸೇರಿಸುತ್ತಾ ಅದಕ್ಕೆಲ್ಲ ಮೂಲವಾಗಬಲ್ಲ ಕ್ಷಣಿಕ ಅಸಡ್ಡೆ, ಬೇಜವಾಬ್ದಾರಿತನ, ಆತುರಗಳ ದುರಂತವನ್ನು ಇಲ್ಕಲಿನ ಕತೆಗಳಲ್ಲಿ ವರ್ಣಿಸಲಾಗಿದೆ. ಇದೊಂದು ಸಾಮಾನ್ಯ ದಲಿತನ ಕಥೆಯಾಗಿದ್ದು ಆತ ಸಮಾಜದಲ್ಲಿ ಅನುಭವಿಸುವ ನೋವು ನಲಿವುಗಳನ್ನು ಇಲ್ಲಿ ಲೇಖಕರು ಕತೆಯ ಮುಖೇನ ಚಿತ್ರಿಸಿದ್ದಾರೆ. ಓಡಾಡುವ ಜೀವಂತ ವ್ಯಕ್ತಿಯೊಂದು ತಾನು ಸತ್ತಿಲ್ಲ ಎನ್ನುವುದನ್ನು ಸಾಬೀತು ಪಡಿಸಬೇಕಾಗಿ ಬಂದ ಕಠಿಣವಾದ ಸಂಗತಿಯ ಸುತ್ತ ಈ ಕತೆಯು ಸಾಗುತ್ತದೆ.
©2024 Book Brahma Private Limited.