ವಿಶ್ವಕಥಾಕೋಶದ 17ನೇ ಸಂಪುಟದಲ್ಲಿ ಹಾಲೆಂಡ್, ಬೆಲ್ಜಿಯಂ, ಸ್ವಿಟ್ಜರ್‌ಲ್ಯಾಂಡ್ ದೇಶದ ಕತೆಗಳಿವೆ. ತಾತನ ಹುಟ್ಟು ಹಬ್ಬ -ಹೆರ್ಮನ್ ಹೀಜರ್‌ಮಾನ್ಸ್, ಚಂಡಿ ಹೆಂಡತಿಯನ್ನು ದಾರಿಗೆ ತರುವುದು ಹೇಗೆ? -ಜಸ್ಟಸ್ ವಾನ್, ಎಫೆನ್ ಕೀಸ್ಜೆ ಹೇಳಿದ ಕಥೆ -ನಿಕೊಲಸ್ ಬೀಟ್ಸ್ ,ಜಾತ್ರೆ-ಪ್ರೇಮಿ -ಮಾರ್ಟೆನ್ ಮಾರ್ಟೆನ್ಸ್, ಸಂಶಯ -ಜೊಹಾನ್ಸ್ ವಾಲ್ಟ್, ನೆರಳು -ಎಮ್ಮಾ ವಾನ್ ಬರ್ಗ್, ನನ್ನ ವೀರ -ಕಾನ್‌ರಾಡ್ ವಾನ್ ಡರ್ ಲೀಡ್, ವಿಚಿತ್ರ ಚಿತ್ರ -ಚಾರ್ಲ್ಸ್ ಡಿ ಕಾಸ್ಟರ್, ಹಿಯೆಪ್-ಹಿಯುಪ್ -ಜಾರ್ಜಸ್ ಈಕ್‌ಹೌಡ್, ನಿರಪರಾಧಿಗಳ ಸಮೂಹ ಹತ್ಯೆ -ಮಾರಿಸ್ ಮೇಟರ್‌ಲಿಂಕ್, ಅಸೂಯೆ -ಸಾಲೊಮನ್ ಗೆಸ್ನರ್, ನರ್ತನದ ದಂತಕಥೆ -ಗಾಟ್‌ಫ್ರೀಡ್ ಕೆಲರ್.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE