ತಮಿಳಿನ ಬಹುಮುಖ್ಯ ಕತೆಗಾರ ಅಶೋಕ ಮಿತ್ರನ್ ಅವರ ಆಯ್ದ ಕೆಲವು ಕತೆಗಳನ್ನು ಇಲ್ಲಿ ಕನ್ನಡೀಕರಿಸುವ ಪ್ರಯತ್ನವನ್ನು ತಮಿಳ್ ಸೆಲ್ವಿ ಮಾಡಿದ್ದಾರೆ. ಅಶೋಕ ಮಿತ್ರನ್ ಎಂಬ ಕಾವ್ಯನಾಮದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದು, ಇವರ ನಿಜವಾದ ಹೆಸರು ‘ಪಿ. ತ್ಯಾಗರಾಜನ್’. ಇವರ ಬಹುಪಾಲು ಕತೆಗಳು ನಗರದಲ್ಲಿ ವಾಸಿಸುವ ಮಧ್ಯಮ ಹಾಗೂ ಕೆಳವರ್ಗದವರ ಬದುಕನ್ನು ಕೇಂದ್ರವನ್ನಾಗಿಸಿವೆ.
ಅವರ ಸಣ್ಣಕತೆಗಳನ್ನೂ ವಸ್ತು, ತಂತ್ರ, ಶೈಲಿಯ ದೃಷ್ಟಿಯಿಂದಲೂ ನೋಡಬಹುದು. ಮಧ್ಯಮ ವರ್ಗದ ಅಸಹಾಯಕತನ, ಮಕ್ಕಳ ಬದುಕು, ಶ್ರಮಿಕರ ಜೀವನ, ತತ್ವ, ಅಮಾನುಷತೆ, ಹಾಸ್ಯ, ಬಡತನ, ಸಿನಿಮಾ, ಪರಿವರ್ತನೆ, ಸ್ತ್ರೀಯರು, ಬಾಂಧವ್ಯಗಳು ಹೀಗೆ ಹಲವು ವಿಷಯಗಳಲ್ಲಿ ವಿಂಗಡಿಸಿ ಕತೆಗಳನ್ನು ರಚಿಸಿದ್ದಾರೆ. ಒಟ್ಟು 30 ಕತೆಗಳಿವೆ. ಅಮ್ಮನಿಗಾಗಿ ಒಂದು ದಿನ, ಎರಡು ನಿಮಿಷಗಳು, ರಂಗೋಲಿ, ಐನೂರು ಕಪ್-ಸಾಸರ್‌ಗಳು, ದೃಶ್ಯ, ಹುಲಿ ವೇಷದ ಕಲಾವಿದ, ನರ್ತನದ ನಂತರ, ಯುಗಧರ್ಮ, ಬೆರಳು, ಬೆಳಗಾಗುವುದರೊಳಗೆ, ಪ್ರಯಾಣ, ಬೆಕ್ಕು, ಇಬ್ಬರಿಗೆ ಸಾಕು, ಪಂಕಜ್ ಮಲ್ಲಿಕ್, ಈಗ ಸಮಯವಿಲ್ಲ, ಪಾತಾಳ, ಸಹಿ, ಸೇವೆ, ನವಿಲುಗರಿ, ನಗು, ಇಂದು ನೆಮ್ಮದಿಯಾಗಿ ನಿದ್ರಿಸಬೇಕು, ಗಡಿಯಾರ, ಈ ವರ್ಷವೂ, ಒಂದು ತಲೆಮಾರು ಮುಗಿಯಿತು, ಒಬ್ಬ ಹಿರಿಯರಿಗಾಗಿ ಒಂದು ಬೆಳಗಿನ ಷೋ, ಗ್ರಂಥಾಲಯಕ್ಕೆ ಹೋಗುವ ದಾರಿಯಲ್ಲಿ ಒಂದು ಕ್ರಿಕೆಟ್ ಮ್ಯಾಚನ್ನು ನೋಡುತ್ತಾ ನಿಂತಾಗ, ರಹಸ್ಯಗಳು, ಶಿವಗಾಮಿಯ ಮರಣ, ಸಿಲ್ವಿಯಾ, ಗಾಂಧಿ ಕತೆಗಳು ಇಲ್ಲಿವೆ.
ಭಾಷಾಂತರಗಾರ್ತಿ, ಭಾಷಾ ಸಂಶೋಧಕಿ ತಮಿಳ್ ಸೆಲ್ವಿಅವರು ಕನ್ನಡ ಪ್ರಾಧ್ಯಾಪಕರು. 1969 ಮಾರ್ಚ್ 13 ರಂದು ಜನಿಸಿದ ಅವರು ದ್ರಾವಿಡ ಮೂಲದ “ಕನ್ನಡ-ತಮಿಳು” ಎಂಬ ಸಂಶೋಧನಾ ಕೃತಿ ಹೊರತಂದಿದ್ಧಾರೆ. ತಮಿಳು ಕನ್ನಡ ಸಾಹಿತ್ಯದ ಸಂಬಂಧ (ತಮಿಳಿನಲ್ಲಿ-ಸಂಶೋಧನೆ), ಚೋಳ-ಪಲ್ಲವ-ಶಿಲ್ಪಕಲೆ, ಅಶೋಕ ಮಿತ್ರನ್ ಕಥೆಗಳು (ಭಾಷಾಂತರ), ಸಂಕ್ರಾಂತಿ (ಭಾಷಾಂತರ), ಅತ್ತಿಮಬ್ಬೆ (ಸಂಶೋಧನೆ), ಶ್ರೀಲಂಕಾದ ತಮಿಳು ಕವಿತೆಗಳು, 6, 7, 8 ಮತ್ತು 10ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳ ಸಂಪಾದನೆ, ನಾನು ಅವನಲ್ಲ ಅವಳು (ಅನುವಾದ). ಕರ್ನಾಟಕ ಲೇಖಕಿಯರ ಸಂಘದ ’ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತ” ಲಭಿಸಿದೆ. ಕಾಂತಾವರ ಕನ್ನಡಸಂಘವು ’ಕರ್ನಾಟಕ ...
READ MORE