ವಿಶ್ವಕಥಾಕೋಶದ 24ನೇ ಸಂಪುಟದಲ್ಲಿ ದಕ್ಷಿಣ ಅಮೆರಿಕಾದ ಕತೆಗಳಿವೆ. ಕಿವುಡು ವನದೇವತೆ -ರೂಬೇನ್ ದಾರೀಓ, ಮನೆತನದ ಗೌರವ -ಕಾರ್ಲೋಸ್ ವೀಲ್ದ್ ಓಸ್ಪಿನಾ, ಔದಾರ್ಯ -ರಿಕಾರ್ಡೋ ಫೇರ್ನಾಂದೇಸ್-ಗಾರ್ಸಿಯಾ, ಮಂಗಳವಾರ ಮಧ್ಯಾಹ್ನದ ಲಘು ನಿದ್ರೆ -ಗಾಬ್ರಿಯೇಲ್ ಗಾರ್ಸಿಯಾ ಮಾರ್ಕೋಸ್, ಓವೇಹೋನ್ -ಲೂಯೀಸ್ ಮಾನ್‌ವೇಲ್ ಉರ್ಬಾನೇಹೋ ಆಖೇಲ್‌ಪೋಲ್, ಕ್ರಿಯೋಲ್ ಪ್ರಜಾಪ್ರಭುತ್ವ -ರೂಫೀನೋ ಬ್ಲಾಂಕೋ ಫೋಂಬೋನಾ, ಸಲ್ಲಪಿಸುವ ಎರಡು ಪಾರಿವಾಳಗಳು -ರಿಕಾರ್ದೋ ಪಾಲ್ಮಾ ಪಿಗ್‌ಮಾಲಿಯೋನ್, ವೃತ್ತಾಂತ -ಬೇಂತೊರಾ ಗಾರ್ಸಿಯಾ ಕಾಲ್ಪೇರೋನ್, ಬಾವಿ -ಅಗಸ್ಟೊ ಸೆಸ್ಪೆಡೆಸ್ ಲುಸೇರೋ -ಓಸ್ಕಾರ್ ಕಾಸ್ತ್ರೋಸ್ ಜೆಡ್, ರಹಸ್ಯಮಯ ಪವಾಡ -ಹೋರ್ಹೇ ಲುಯಿಸ್ ಬೋರ್ಹೇಸ್, ಮೂರು ಪತ್ರಗಳು: ಒಂದು ಟಿಪ್ಪಣಿ -ಓರಾತಿಯೋ ಕುರೋಗಾ, ಅನುಚರನ ತಪ್ಪೊಪ್ಪಿಗೆ -ಜೆ.ಎಂ.ಮಕಾದೊ ದ ಅಸಿಸ್, ವಿದೂಷಕನ ಪಶ್ಚಾತ್ತಾಪ -ಮೋಂತೇರೋ ಲೋಬಾತೊ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE