ಹೂವಿನ ಪರಿಮಳದಷ್ಟೇ ಮುಕ್ತವಾದ, ಆದರೆ ಅನಿರ್ವಚನೀಯವಾದ ಝೆನ್, ಶತಮಾನಗಳಷ್ಟು ಹಿಂದೆಯೇ ಭಾರತದಿಂದ ವಲಸೆ ಹೋಗಿ ಚೀನ ಮತ್ತು ಜಪಾನ್ ದೇಶಗಳಲ್ಲಿ ನೆಲೆಕಂಡುಕೊಂಡ ಬೌದ್ಧಧರ್ಮದ ಹಲವು ಶಾಖೆಗಳಲ್ಲಿ ಪ್ರಮುಖವಾದದ್ದು. ಝೆನ್, ಸಂಸ್ಕೃತ ’ಧ್ಯಾನ’ದ ಅಪ್ರಭ್ರಂಶ. ಚೀನಾದಲ್ಲಿ ’ಚಾನ್’ ಆಗಿ ಜಪಾನಿನಲ್ಲಿ ಝೆನ್ ಆಗಿ ಭದ್ರ ನೆಲೆಯೂರಿತು. ಈಗ ಜಪಾನಿನ ಒಂದು ಪ್ರಮುಖ ಧರ್ಮವಾದ ’ಝೆನ್’ ಬೋಧಿಸುವುದು ಆತ್ಮಜ್ಞಾನ ಅಥವಾ ವ್ಯಕ್ತಿಯ ಸ್ವ-ಪ್ರಜ್ಞೆಯ ಜ್ಞಾನೋದಯ.
ಈ ಗುರಿ ಸಾಧನೆಗೆ ಮಾಧ್ಯಮವಾಗಿ ಗುರುಮುಖೇನ ಒದಗಿ ಬಂದವು; ಕಥೆ, ಕವಿತೆ, ಒಗಟು, ಸಂವಾದ ಝೆನ್ ಕಥೆ, ಕವಿತೆ, ಮುಂಡಿಗೆಗಳು. ಅಗಮ್ಯವಾದ ಸ್ವರ್ಗಕ್ಕಿಂತ ಮರ್ತ್ಯದ ಮುಖಾಮುಖಿಯಲ್ಲೆ ’ಮಹಾಶೂನ್ಯ’ದ ಅನ್ವೇಷಣೆಯಲ್ಲಿ ತೊಡಗುತ್ತವೆ. ಈ ಪ್ರಕ್ರಿಯೆಯಲ್ಲೇ ಬದುಕಿನ ಅನಂತತೆ ಮತ್ತು ನಶ್ವರದವರೆಗಿನ ಸಕಲವೂ ಪ್ರತ್ಯಕ್ಷವಾಗುತ್ತ, ನಮ್ಮ ಪ್ರಜ್ಞೆಗೆ ತಾಕುವುದರಲ್ಲಿ ’ಆತ್ಮಜ್ಞಾನ’ ತಟ್ಟನೆ ಅಭಿವ್ಯಕ್ತಿಗೊಳ್ಳುತ್ವೆ. ಇವು ಕುಶಾಲಿನ ಕತೆಗಳೂ ಹೌದು, ಅಂತರಂಗಕ್ಕೆ ತಾಕುವ ಗಂಭೀರ ಕತೆಗಳೂ ಹೌದು.
©2024 Book Brahma Private Limited.