`ಅರಳಿಮರ' (ಝನ್ ಸೂಫಿ ಸಣ್ಣ ಕಥೆಗಳು) ಚೇತನಾ ತೀರ್ಥಹಳ್ಳಿ ಹಾಗೂ ಚಿದಂಬರ ನರೇಂದ್ರ ಅವರು ಸಂಪಾದಿಸಿದ್ದಾರೆ. ಇಲ್ಲಿ ಒಟ್ಟು 150 ಕಥೆಗಳಿವೆ. ಧರ್ಮಗಳು, ಅಧ್ಯಾತ್ಮ ಪರಂಪರೆಗಳು ಕಥೆಗಳನ್ನು ಬಳಸಿಕೊಳ್ಳಲಾಗಿದೆ. ಈ ಕತೆಗಳು ನಮ್ಮ ದೈನಂದಿನ ಬದುಕವನ್ನು ಸಹ್ಯವೂ ಸುಂದರವೂ ಆಗಿಸುವ ಜೀವ ಕಣಜದಂತಿವೆ. ವಿವಿಧ ಮೂಲಗಳಿಂದ ಸಂಗ್ರಹಿಸಿ ಅನುವಾದಿಸಿರುವ ಝೆನ್, ಸೂಫಿ, ಪುರಾಣ ಮತ್ತು ಜನಪದ ಕತೆಗಳ ಒಟ್ಟು ಸಂಖ್ಯೆ ಐನೂರು ಸಮೀಪಿಸಿದೆ. ಅವುಗಳಲ್ಲಿ 150 ಝೆನ್ ಮತ್ತು ಸೂಫಿ ಕತೆಗಳನ್ನು ಆಯ್ದು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವುದಾಗಿ ಸಂಪಾದಕರು ಹೇಳಿದ್ದಾರೆ.
ಹುಟ್ಟೂರು ತೀರ್ಥಹಳ್ಳಿ. ಮೂಲ ಹೆಸರು ಗಾಯತ್ರಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಮೂವತ್ತು ವರ್ಷಗಳಿಂದ ಗದ್ಯ - ಪದ್ಯ ರಚನೆಯಲ್ಲಿ ತೊಡಗಿಕೊಂಡಿದ್ದು, ಸ್ವತಂತ್ರ ಕೃತಿ, ಅನುವಾದ, ಸಂಪಾದನೆ ಸೇರಿದಂತೆ 15 ಪುಸ್ತಕಗಳು ಪ್ರಕಟವಾಗಿವೆ. ‘ಉಫೀಟ್’ – ಉದಯೋನ್ಮುಖ ಬರಹಗಾರರ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಪ್ರಕಟಗೊಂಡ ಮೊದಲ ಪದ್ಯ ಸಂಕಲನ. ‘ಭಾಮಿನಿ ಷಟ್ಪದಿ’ ಅಂಕಣ ಸಂಕಲನವಾಗಿದ್ದು, ಎರಡು ಮುದ್ರಣ ಕಂಡಿದೆ. ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಮತ್ತು ‘ಸೂರ್ಯನೆದೆಯ ನೀರಬೀಜ’ ಮುದ್ರಿತ ಪದ್ಯ ಸಂಕಲನಗಳು; ‘ಕಣೇ ಲಾ ಪದ್ಯಗಳು’ ಇ - ಬುಕ್ ಸಂಕಲನವಾಗಿ ಪ್ರಕಟವಾಗಿದೆ. ‘ಬಿಸಿಲ ಚೂರಿನ ಬೆನ್ನು’, ‘ಅಧ್ಯಾತ್ಮ ಡೈರಿ’ ಬ್ಲಾಗ್ ಮತ್ತು ವೆಬ್‍ಸೈಟ್‍ಗಳಲ್ಲಿ ಪ್ರಕಟಗೊಂಡ ...
READ MORE