ಟಾಲಸ್ಟಾಯಿಯವರ ಕಥೆಗಳು

Author : ಎಲ್. ಗುಂಡಪ್ಪ

Pages 396




Year of Publication: 1936
Published by: ಭಾರತಿ ಸಾಹಿತ್ಯ ಮಂದಿರ
Address: ಬಸವನ ಗುಡಿ, ಬೆಂಗಳೂರು

Synopsys

ರಷ್ಯಾದ ಲಿಯೋ ಟಾಲಸ್ಟಾಯಿ ಉತ್ತಮ ಕಲಾವಿದರು. ಚಿಂತಕರು. ಮಾನವತಾವಾದಿ. ಕಥೆ-ಕಾದಂಬರಿ ಮೂಲಕ ಮಾನವನ ಸಣ್ಣತನ ಮತ್ತು ಸಾಧಿಸಲು ಇರುವ ಅಗಾಧತನವನ್ನು ತೋರಿದವರು. ಅವರ 20 ಕಥೆಗಳನ್ನು ಲೇಖಕ ಎಲ್. ಗುಂಡಪ್ಪ ಅವರು ಅನುವಾದಿಸಿದ್ದಾರೆ. ಸ್ಥಳ-ಹೆಸರುಗಳನ್ನು ಇಲ್ಲಿ ಹೊಂದಿಕೆಯಾಗುವಂತೆ ಬದಲಿಸಿದೆ ಎಂದು ಲೇಖಕರು ತಿಳಿಸಿದ್ದಾರೆ. ಕಡೆಗಣಿಸಿದ ಕಿಡಿ ಮನಸ್ಸನ್ನು ಸುಡುತ್ತದೆ, ಮರಿಪಿಶಾಚಿಯು ರೊಟ್ಟಿಯನ್ನು ಸಂಪಾದಿಸಿದ ಬಗೆ, ಪಶ್ಚಾತ್ತಾಪಿಯಾದ ಪಾಪಿ, ಬೆಪ್ಪತಕಡಿ ಐವಾನ್-ಈ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಬ್ಬರು ಮುದುಕರು, ಎಲ್ಲಿ ಪ್ರೇಮವೋ ಅಲ್ಲಿ ದೇವರು, ಕೆಲಸ, ಸಾವು ಮತ್ತು ರೋಗ, ಕೆಟ್ಟದ್ದು ಸೆಳೆಯುತ್ತದೆ; ಒಳ್ಳೆಯದು ಉಳಿಯುತ್ತದೆ, ಚಿಕ್ಕ ಹುಡುಗಿಯರು ದೊಡ್ಡವರಿಗಿಂತ ವಿವೇಕಿಗಳು, ಜನರು ಜೀವಿಸುವುದೇತರಿಂದ?, ಮೂರು ಪ್ರಶ್ನೆಗಳು ಹೀಗೆ ಒಟ್ಟು 20 0ಕಥೆಗಳು ಬದುಕಿನ ತೀವ್ರತೆಯನ್ನು, ಅಗಾಧತನವನ್ನು, ಕ್ಷಣಿಕತನವನ್ನುತೋರುತ್ತವೆ.

About the Author

ಎಲ್. ಗುಂಡಪ್ಪ
(08 January 1903 - 17 December 1986)

ಹಾಸನ ಜಿಲ್ಲೆ ಮತಿಘಟ್ಟದವರಾದ ಎಲ್.ಗುಂಡಪ್ಪ ಅವರು ಕನ್ನಡದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಅವರ ತಂದೆ ಲಿಂಗಣ್ಣಯ್ಯ ಮತ್ತು ತಾಯಿ ಚನ್ನಮ್ಮ. ಮೈಸೂರು ವಿಶ್ವವಿದ್ಯಾಲಯದ ಸಿಲ್ವರ್ ಜ್ಯೂಬಿಲಿ ಕನ್ನಡ ಸ್ವರ್ಣಪದಕ ವಿಜೇತರಾಗಿದರು. ತಮಿಳು - ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದಕ್ಕಾಗಿ ಅವರಿಗೆ ನಾಗರ್ ಕೋಯಲಿನಲ್ಲಿ ಬಂಗಾರದ ಪದಕ ನೀಡಿ ಗೌರವಿಸಲಾಗಿತ್ತು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಮೆ ಅವರದು. ಕಳ್ಳಮರಿ, ಮಕ್ಕಳ ರವೀಂದ್ರರು, ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ವ ಪರಿಚಯ (ಭಾರತ ಸರ್ಕಾರದ ಬಹುಮಾನಗಳಿಸಿರುವ ಕೃತಿ). ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕ ರಚಿಸಿರುವ ಅವರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ದೇವರಾಜ ಬಹದ್ದೂರ್ ಬಹುಮಾನ ದೊರೆತಿದೆ. ಅವರ 52 ಕೃತಿಗಳು ಪ್ರಕಟವಾಗಿವೆ. ...

READ MORE

Related Books