ಕಥಾಸರಿತ್ಸಾಗರದ 2125 ಶ್ಲೋಕಗಳಿರುವ ಹತ್ತನೆಯ ಲಂಬಕದ ಅನುವಾದವನ್ನು ಕೂಡ ಖ್ಯಾತ ಸಂಸ್ಕೃತ ವಿದ್ವಾನ್ ಶ್ರೀ ಶೇಷಾಚಲ ಶರ್ಮ ಅವರು ಮಾಡಿಕೊಟ್ಟಿದ್ದಾರೆ. ಐಶ್ವರ್ಯದ ಅನಿತ್ಯತೆ, ಕುಟಿಲ ಸ್ತ್ರೀಯರ ಹೃದಯಲ್ಲಿರುವ ಮೋಸ ಮಾಡುವ ಭಾವ, ಚಿತ್ತಚಾಂಚಲ್ಯ, ಇವುಗಳಿಂದ ಪ್ರಭುತ್ವದ ಹೊಣೆಯನ್ನು ಹೊತ್ತಿರುವವರು ಹೇಗೆ ದೂರವಿರಬೇಕೆಂಬುದನ್ನು ವಿವರಿಸುವ ಕಥೆಗಳನ್ನುಈ ಕೃತಿಯೂ ಒಳಗೊಂಡಿದೆ. ಸಂಸ್ಕೃತ ಸಾಹಿತ್ಯದ ಗದ್ಯ ವಿಭಾಗದಲ್ಲಿ ಅಜರಾಮರವಾಗಿ ಇರುವ ಬಾಣ ಭಟ್ಟನಿಗೆ ಸ್ಫೂರ್ತಿ ಹಾಗೂ ಕಥಾವಸ್ತುವನ್ನು ನೀಡಿರುವ ಕಥೆಯನ್ನು ಈ ಲಂಬಕವು ಒಳಗೊಂಡಿದೆ.
©2024 Book Brahma Private Limited.