ಹಿರಿಯ ಸಾಹಿತಿ ದೇವುಡು ನರಸಿಂಹಶಾಸ್ತ್ರಿಗಳು ಮೂಲ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಕೃತಿ-ಹೊಸಗನ್ನಡ ಪಂಚತಂತ್ರ. ಸಣ್ಣ ಸಣ್ಣ ಕಥೆಗಳ ಮಾದರಿ ಮೂಲಕ ಸಾಹಿತ್ಯದ ಆಕರ್ಷಣೆಗೆ ಹಾಗೂ ರಸವತ್ತತೆಗೆ ತನ್ನದೇ ಕೊಡುಗೆ ನೀಡಿದ ಪಂಚತಂತ್ರದ ಕಥೆಗಳು ವಿಶೇಷವಾಗಿ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿವೆ. ದೊಡ್ಡವರಿಗೂ ಹತ್ತು ಹಲವು ರೀತಿಯಲ್ಲಿ ಉಪದೇಶ-ಸಲಹೆ -ನೀತಿ ಬೋಧಿಸುತ್ತವೆ.
’ಮಹಾಕಾದಂಬರಿಕಾರ’ ಎಂದು ಹೆಸರುವಾಸಿಯಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳು ಶಿಕ್ಷಕರಾಗಿ, ಸಂಪಾದಕರಾಗಿ, ನಟರಾಗಿ, ವಿಮರ್ಶಕರಾಗಿ ತಮ್ಮ ಪ್ರತಿಭೆ- ಪಾಂಡಿತ್ಯ ಮೆರೆದಿದ್ದರು. ನರಸಿಂಹ ಶಾಸ್ತ್ರಿಗಳು ಜನಿಸಿದ್ದು ಮೈಸೂರಿನ ರಾಜಪುರೋಹಿತರ ಮನೆತನದಲ್ಲಿ. 1896ರ ಡಿಸೆಂಬರ್ 26ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆಸರೆಯಲ್ಲಿ ಬೆಳೆದ ನರಸಿಂಹಶಾಸ್ತ್ರಿಗಳು ತೀಕ್ಷ್ಣ ಬುದ್ಧಿಯುಳ್ಳವರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದಂತಹ ಕಾವ್ಯ ಮತ್ತುಭಾಗವತದಂತಹ ಪುರಾಣಗಳನ್ನು ಓದಿ ಅರಿತಿದ್ದರು. ಹದಿನೈದನೆಯ ವಯಸ್ಸಿನಲ್ಲಿಯೇ ಛಂದೋಬದ್ಧವಾಗಿ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡರು. ಸಾಂಪ್ರದಾಯಿಕ ವೈದಿಕ ವಿದ್ಯೆಯ ಜೊತೆಯಲ್ಲಿಯೇ ಬಿ.ಎ., ಎಂ.ಎ. ಪದವಿಯನ್ನು ಸಂಸ್ಕೃತ ಹಾಗೂ ಭಾರತೀಯ ತತ್ವಶಾಸ್ತ್ರದಲ್ಲಿ ಪಡೆದಿದ್ದರು. ಸರ್ವಪಲ್ಲಿ ...
READ MORE