ಈ ಸಂಪುಟ ಕಥಾಸರಿತ್ಸಾಗರದ ಕಥಾಮುಖ ಮತ್ತು ಲಾವಾಣಕ ಎಂಬ ಎರಡು ಲಂಬಕಗಳನ್ನು ಹೊಂದಿದ್ದು ಹೆಚ್.ವಿ.ನಾಗರಾಜ ರಾವ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸಂಸ್ಕೃತದ ಕಾವ್ಯ ಪುರಾಣಗಳ ಕಥೆಗಳೆಂದು ನಾವು ಪರಿಗಣಿಸಿರುವ ಹಲವು ಕಥೆಗಳು ಈ ಲಂಬಕಗಳಲ್ಲಿ ಸೇರಿವೆ. ಕುಂತಿ ದುರ್ವಾಸರ ಪ್ರಸಂಗ, ಊರ್ವಶಿ ಪುರೂರವನ ಪ್ರಸಂಗ, ಅಹಲ್ಯೆಯ ಕಥೆಯನ್ನು ಈ ಕೃತಿಯೂ ಒಳಗೊಂಡಿದೆ. ಸಹಸ್ರಾನೀಕ, ಶ್ರೀದತ್ತ, ಪ್ರದ್ಯೋತ, ರುರು ಪ್ರಮದ್ವರೆ, ಫಲಭೂತಿ, ಕಾಳರಾತ್ರಿ ಈ ಮನೋಹರವಾದ ಕಥೆಗಳು ಕೂಡ ಈ ಕೃತಿಯಲ್ಲಿದೆ.
ಸಂಸ್ಕೃತ ವಿದ್ವಾಂಸ ಹೆಚ್.ವಿ. ನಾಗರಾಜರಾವ್ ಮೂಲತಃ ಕೋಲಾರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಯಲ್ಲಿ (10-9-1942) ಹುಟ್ಟಿದರು. ಎರಡೂವರೆ ವರ್ಷದ ಬಾಲಕರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಅಜ್ಜನ ಮನೆಯಲ್ಲಿ ಬೆಳೆದರು. ಪ್ರೌಢಶಾಲೆಯ ವ್ಯಾಸಂಗದ ಬಳಿಕ ಬಟ್ಟೆಯ ಅಂಗಡಿಯಲ್ಲಿ ದುಡಿದರು. ವಿದ್ಯಾಗುರು ವಿದ್ವಾನ್‌ಎನ್.ವಿ. ಅನಂತರಾಮಯ್ಯನವರು ಇವರಿಗೆ ನೆರವಾಗುತ್ತಾರೆ. ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತರಾಗಿ ಮೈಸೂರಿಗೆ ಬಂದು ಸಂಸ್ಕೃತ ಮಹಾ ಪಾಠಶಾಲೆ ಸೇರಿ, ಅಲಂಕಾರ ಶಾಸ್ತ್ರಗಳನ್ನು ಕಲಿತರು. ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ಎಂ. ಎ. ಪರೀಕ್ಷೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದರು. ಇವರ ವ್ಯಾಕರಣ ಗುರು ವಿದ್ವಾನ್ ಸೋ. ರಾಮಸ್ವಾಮಿ ಅಯ್ಯಂಗಾರ್ ಅವರು ತಮ್ಮಲ್ಲಿ ಕಲಿಯಲು ಬಂದ ...
READ MORE