'ಬದುಕಿಗೆ ನೀತಿ ಕಥೆಗಳು' ಎಸ್. ಟಿ ರಾಮಚಂದ್ರ ಅವರ ಅನುವಾದಿತ ಕಥಾಸಂಕಲನವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಮನಸ್ಸನ್ನು ಅರಳಿಸುವ, ಅವರಿಗೆ ಮುದ ನೀಡುವ, ಮಾನವೀಯ ಮೌಲ್ಯಗಳನ್ನು ಪರಿಚಯಿಸುವ, ಆದರ್ಶಗಳನ್ನು ಹೇಳುವ ಸಾವಿರಾರು ಕಥೆಗಳು ಪ್ರಚಲನೆಯಲ್ಲಿವೆ. ಇವು ನಮ್ಮ ಮಕ್ಕಳ ಮನಸ್ಸುಗಳನ್ನು ತಿದ್ದುತ್ತ ಬಂದಿವೆ. ಇಂದು ನಮ್ಮ ಎಲ್ಲ ಪತ್ರಿಕೆಗಳಲ್ಲೂ ಈ ಬಗೆಯ ನೀತಿಬೋಧ ಕಥೆಗಳು ಪ್ರಕಟವಾಗುತ್ತಲೇ ಇರುತ್ತವೆ. ನಮ್ಮ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ದಿನಕ್ಕೊಂದು ಗಂಟೆಯಾದರೂ ಇಂಥ ಮೌಲ್ಯಯುತ ಕಥೆಗಳನ್ನು ಹೇಳುವಂತಾದರೆ ಮತ್ತು ಅವನ್ನು ಕೇಳಿ ಮಕ್ಕಳ ಮನಸ್ಸುಗಳು ವಿಕಸಿತಗೊಂಡಿತಾದರೆ ಮಕ್ಕಳ ಮನಸ್ಸುಗಳು ಅಡ್ಡದಾರಿಗಳತ್ತ ಹರಿಯುವುದಿಲ್ಲ. ಬದಲಾಗಿ ಸಕಾರಾತ್ಮಕ ಚಿಂತನೆಯತ್ತ ಮನಸ್ಸುಗಳು ಹೊರಳುತ್ತವೆ.
ಪ್ರಸ್ತುತ ಸಂಗ್ರಹದ ಎಲ್ಲ ಕಥೆಗಳೂ ಚಾರಿತ್ರ್ಯ ವಿಕಾಸಕ್ಕೆ ಅನುಗುಣವಾಗಿವೆ. ಅಷ್ಟೇ ಅಲ್ಲ, ಇವನ್ನು ಓದಿದ ಓದುಗ ತಮ್ಮನ್ನು ತಿದ್ದಿಕೊಳ್ಳಬಹುದಾಗಿದೆ. ಈ ಕಥೆಗಳು ತುಂಬ ರಂಜನೀಯವಾಗಿವೆ. ಈ ಕಥೆಗಳು ಕನ್ನಡದ ಸಹಜ ಶೈಲಿಯಲ್ಲಿ ಓದಿಸಿಕೊಳ್ಳುತ್ತವೆ. ಅನುವಾದಕರಾದ ಡಾ. ಎಸ್.ಟಿ. ರಾಮಚಂದ್ರ ಅವರು ಸರಳ ಕನ್ನಡದಲ್ಲಿ ಮಕ್ಕಳಿಗೆ ಅರ್ಥವಾಗುವಂತಹ ಸುಲಲಿತ ಶೈಲಿಯಲ್ಲಿ ಮನೋಜ್ಞವಾಗಿ ಅನುವಾದಿಸಿದ್ದಾರೆ. ಕಥೆಗಳ ಜೊತೆ ಜೊತೆಗೆ ಹಲವಾರು ಚಿತ್ರಗಳನ್ನೂ ಬರೆಸಿ ಹಾಕಿರುವುದು ಪುಸ್ತಕದ ಮೌಲ್ಯವನ್ನು ಹೆಚ್ಚು ಮಾಡಿದೆ. ತಿಪ್ಪೇಸ್ವಾಮಿ ಕೃತಿಯ ಬಗ್ಗೆ ತಿಳಿಸಿದ್ದಾರೆ.
ಎಸ್ ಟಿ. ರಾಮಚಂದ್ರ ಮೂಲತಃ ಮಂಡ್ಯ ಜಿಲ್ಲೆಯ ಸಿದ್ದಯ್ಯನಕೊಪ್ಪಲಿನವರು. ಬ್ಯಾಂಕಿಂಗ್ ಆಡಳಿತ ಶಿಕ್ಷಣ ಹಾಗೂ ಅಧ್ಯಯನದಲ್ಲಿ 35 ವರ್ಷಗಳ ಅನುಭವ ಹೊಂದಿದ್ದಾರೆ. ಮುಂಬೈ, ದೆಹಲಿ, ತಿರುವನಂತಪುರಂ, ಮೈಸೂರು, ಬೆಂಗಳೂರು ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ಸೇವೆಸಲ್ಲಿಸಿದ್ದಾರೆ. ಕ್ಷೇತ್ರೀಯ ಕಛೇರಿ, ವೃತ್ತ ಕಛೇರಿ ಹಾಗೂ ಮುಖ್ಯ ಕಛೇರಿಗಳನ್ನೊಳಗೊಂಡಂತೆ ಹಲವು ಶಾಖೆಗಳಲ್ಲಿ ಸೇವೆ ಸಲ್ಲಿಕೆ, ಶಾಖಾ ವ್ಯವಹಾರ, ತಂತ್ರಜ್ಞಾನ ಅಳವಡಿಕೆ, ಪರಿಶೀಲನೆ, ವಸೂಲಾತಿ, ಸಾಲ, ಮಾರ್ಕೆಟಿಂಗ್, ಸಾಂಸ್ಥಿಕ ಸಂವಹನೆ ಮತ್ತು ಗ್ರಾಹಕ ಸಂಪರ್ಕ ಅಭಿವೃದ್ಧಿ, ಸಾಮಾನ್ಯ ಆಡಳಿತ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ, ನೌಕರ ಸಂಬಂಧಿತ ವಿಷಯಗಳು, ಆಸ್ತಿ ಸಂರಕ್ಷಣೆ, ಆಡಳಿತಾತ್ಮಕ ...
READ MORE