ಮಲಯಾಳಂ ಕಥಾಗಾರರಾದ ದೇವಿದಾಸ್ ವಿ.ಎಸ್., ಪಿ.ವಿ. ಶಾಜಕುಮಾರ ಹಾಗೂ ಸುಸ್ಜೋತ್ ಚಂದ್ರೋತ್ ಅವರ ಮಲಯಾಳಂ ಕಥೆಗಳನ್ನು ಲೇಖಕ ಕೆ. ಪ್ರಭಾಕರನ್ ಅವರು ತನ್ನಡಕ್ಕೆ ಅನುವಾದಿಸಿರುವ ಕೃತಿ-ನಖ ಶಿಖಾಂತ ಮತ್ತು ಇತರೆ ಮಲಯಾಳಂ ಕಥೆಗಳು. ಕಥೆಯ ವಸ್ತುವಿನಲ್ಲಿ ವೈವಿಧ್ಯತೆ ಇದ್ದು, ಆಳ ಚಿಂತನೆಗೆ ಓದುಗರನ್ನು ದೂಡುತ್ತವೆ. ನಿರೂಪಣಾ ಶೈಲಿಯು ಆಕರ್ಷಕ ಹಾಗೂ ಪರಿಣಾಮಕಾರಿಯಾಗಿವೆ.
ವೃತ್ತಿಯಿಂದ ಎಂಜಿನಿಯರ್ ಆಗಿರುವ ಕೆ. ಪ್ರಭಾಕರನ್ ಅವರು ಮೆಸ್ಕಾಮ್ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ)ದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದರು (2014ರ ವರೆಗೆ). ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಸದ್ಯ ಶಿವಮೊಗ್ಗ ನಿವಾಸಿ. ಸಾಹಿತ್ಸಯ ಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಮಲೆಯಾಳಂನಿಂದ ’ಕನಸನೂರಿನ ಕಿಟ್ಟಣ್ಣ’ ಕೃತಿಯನ್ನು ಕನ್ನಡೀಕರಿಸಿದ್ದಾರೆ. ...
READ MORE