ಆರು ಮಂದಿ ಮಲೆಯಾಳದ ಕಥೆಗಾರ್ತಿಯರ 25 ಕತೆಗಳನ್ನು ಹಿರಿಯ ಲೇಖಕಿ ಪಾರ್ವತಿ ಜಿ. ಐತಾಳ್ ಅವರಿಂದ ಅನುವಾದಿತಗೊಂಡ ಕೃತಿ ’ಮಲಯಾಳದ ಪ್ರಸಿದ್ದ ಪೆಣ್ ಕಥೆಗಳು’.
ಸಾರಾ ಜೋಸೆಫ್, ಅವರ ಮುಂದ ಸೇತುವೆ, ಒಬ್ಬೊಬ್ಬ ಬರಹಗಾರ್ತಿಯ ಒಳಗೂ, ಅಶೋಕ, ಕೊನೆಯ ಸೂರ್ಯಕಾಂತಿ, ಅವನು, ಮಾನಸಿ, ಅವರ ಸೇತುವೆಯಿಲ್ಲದ ಹೊಳೆ, ಅಕ್ಷರ ತಪ್ಪುಗಳು, ಬೇರು, ಶೀಲಾವತಿ, ದೇವಿ ಮಹಾತ್ಮೆ, ಸಿತಾರಾ ಅವರ ಸಾಕ್ಷಿ, ಸರಕು, ಸ್ಪರ್ಶ, ಶೀಬಾ ಇ.ಕೆ, ಅವರ ಪ್ಲೇ ಸ್ಟೇಷನ್, ಡ್ಯಾಂ, ಪ್ರಳಯ, ಸೀತಾಯಣ, ನೀಲ ಲೋಹಿತ, ಶಾಹೀನಾ ಇ. ಕೆ, ರಚಿಸಿದ ಕಲಾವಿದೆ, ಮಿಸ್ಡ್ ಕಾಲ್, ರೇಖಾ ಕೆ ಅವರ ಯಾರದ್ದೋ ಓರ್ವ ಸಂಗತಿ, ಓಟಗಾರ್ತಿ, ರಂಗಪಟದಂತಹ ಅನೇಕ ಕತೆಗಳು ಈ ಕೃತಿಯಲ್ಲಿದೆ.
ಪಾರ್ವತಿ ಜಿ.ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎಂಬ ಹಳ್ಳಿಯಲ್ಲಿ ಜುಲೈ 23, 1957ರಂದು ಜನಿಸಿದರು. 1981ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. 2012ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ 1988ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾರ್ವತಿ ಅವರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ...
READ MORE