ಎ.ಎನ್. ಪ್ರಸನ್ನ ಅವರು ಆಧುನಿಕ ಸಂವೇದನೆಯ ಕಥೆಗಾರರು. ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಬೃಹತ್ ಕಾದಂಬರಿಯನ್ನು ಕನ್ನಡಿಗರಿಗೆ ಪರಿಚಯಿಸಿದ ಅನುವಾದಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಈಗ ಮಾರ್ಕ್ವೆಜ್ ಅವರ ಹತ್ತು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಯಾವುದೇ ಕೃತಿ ಗೆಲ್ಲಬೇಕಾದ ಮೊದಲ ಪರೀಕ್ಷೆ ಎಂದರೆ ಓದುವಿಕೆ, ನಂತರ ರಸವಿಮರ್ಶೆ. ಮೂಲದ ಅರ್ಥ, ಧ್ವನಿ, ಸಾಂಸ್ಕೃತಿಕ ಪರಿಸರಗಳಿಗೆ ನಿಷ್ಠವಾಗಿರುವ ಪ್ರಸನ್ನರ ಈ ಅನುವಾದ ಸರಾಗವಾಗಿ ಓದಿಸಿಕೊಳ್ಳುತ್ತದೆ.
ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...
READ MORE