ಸ್ವಾತಂತ್ಯ್ರಪೂರ್ವದ ಅವಧಿಯಲ್ಲಿ ಶಿಕಾರಿಗಳಿಗೆ ಸಂಬಂಧಿಸಿದ ಕತೆಗಳನ್ನು ಸಂಗ್ರಹಿಸಿ, ಇತರೆ ಭಾಷೆಗಳಲ್ಲಿದ್ದರೆ ಅವುಗಳನ್ನು ಅನುವಾದಿಸಿ ಲೇಖಕ ಗಿರೀಶ್ ತಾಳಿಕಟ್ಟೆ ಅವರು ಸಂಕಲಿಸಿದ ಕೃತಿ-ಸ್ವಾತಂತ್ಯ್ರಪೂರ್ವ ಶಿಕಾರಿ ಕತೆಗಳು. ದೇಶಕ್ಕೆ ಸ್ವಾತಂತ್ಯ್ರ ಬಂದಾಗಿನಿಂದ ಶಿಕಾರಿಗೆ ಸಂಬಂಧಿಸಿದಂತೆ ಕಾನೂನು ನಿಯಮಗಳೂ ಬಿಗಿಯಾಗಿ, ಶಿಕಾರಿ ಚಟುವಟಿಕೆಗಳನ್ನೇ ನಿರ್ಬಂಧಿಸಲಾಗಿದೆ. ಆದರೆ, ಸ್ವಾತಂತ್ಯ್ರಪೂರ್ವ ಅವಧಿಯಲ್ಲಿ ಇನ್ನೂ ಸಣ್ಣ ಸಣ್ಣ ಸಂಸ್ಥಾನಗಳ ಅರಸು ಮನೆತನಗಳು ಇದ್ದವು. ಆ ಅರಸರು ವನ್ಯಜೀವಿಗಳನ್ನು ಬೇಟೆಯಾಡುವುದು ಶೌರ್ಯದ ಭಾಗವೆಂತಲೂ ತಿಳಿಯುತ್ತಿದ್ದರು. ಶಿಕಾರಿಗೆ ಹೋದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಕಥೆಯಾಗಿಸಿ, ಅಂದಿನ ಪ್ರಚಲಿತದಲ್ಲಿದ್ದ ಸಾಮಾಜಿಕ ವಿವಿಧ ಆಯಾಮಗಳನ್ನು, ಶಿಕಾರಿ ಕುರಿತಂತೆ ಜನರ ನಂಬುಗೆಗಳನ್ನು ಪರಿಚಯಿಸುವುದು, ಇತಿಹಾಸದ ದೃಷ್ಟಿಯಿಂದಲೂ ಇಂತಹ ಪ್ರಸಂಗಗಳು ಹತ್ತು ಹಲವು ನೆಲೆಯಲ್ಲಿ ಪೂರಕ ಆಕರಗಳನ್ನು ಈ ಕತೆಗಳು ಪೂರೈಸುತ್ತವೆ. ಈ ಹಿನ್ನೆಲೆಯಲ್ಲಿ, ಕಥೆಗಳಾದರೂ ಇವು ಇತಿಹಾಸದ ನಂಟಿನೊಂದಿಗೆ ತಳಕು ಹಾಕಿಕೊಂಡಿದ್ದರಿಂದ ಸಾಹಿತ್ಯ ಹಾಗೂ ಇತಿಹಾಸದ ಮೌಲ್ಯಗಳನ್ನು ಒಳಗೊಂಡಿವೆ.
©2024 Book Brahma Private Limited.