ಜಿ.ಪಿ. ರಾಜರತ್ನಂ ಅವರು ಅನುವಾದಿಸಿದ ಸಣ್ಣ ಕಥೆಗಳ ಸಂಕಲನ. ಇಲ್ಲಿ ಒಟ್ಟು 4 ಕಥೆಗಳಿವೆ. ಅರಸನ ಕನಸು, ಪಂಡಿತನ ನೆರಳು, ಚಿಕ್ಕ ಮೀನಕನ್ಯೆ ಹಾಗೂ ಕುರುಪಿಯಾದ ಮರಿಬಾತು-ಇವು ಕಥೆಗಳ ಶೀರ್ಷಿಕೆಗಳು. ಅರಸನ ಕನಸು-ಜಾರ್ಜಿಯಾ ದೇಶದ ಜನಪದ ಸಾಹಿತ್ಯದಲ್ಲಿ ಪಡೆದುಕೊಂಡಿದ್ದರೆ ಉಳಿದವು ಡೆನ್ಮಾರ್ಕ ದೇಶದ ಹ್ಯಾನ್ಸ್ ಕ್ರಿಶ್ಚಿಯನ್ ಅಂಡರ್ ಸನ್ ಎಂಬಾತನ ಕಥೆಗಳ ಅನುವಾದವಾಗಿವೆ. ಇವು ಫೇರಿ ಟೇಲ್ಸ್ (ಕಿನ್ನರಿ ಕಥೆಗಳು) ಎಂದೇ ಪ್ರಸಿದ್ಧಿ ಪಡೆದಿವೆ. ನಮ್ಮಲ್ಲಿಯ ಪಂಚತಂತ್ರದ ಕಥೆಗಳಿದ್ದ ಹಾಗೆ, ಈಸೋಪನ ಫೆಬಲ್ಸ್ ಗಳಿದ್ದ ಹಾಗೆ, ಸಂಸ್ಕೃತ ಸಾಹಿತ್ಯದಲ್ಲಿರುವಂತೆ ‘ಅನ್ಯಾಪದೇಶ’ ಗಳಂತೆ ಈ ಕಿನ್ನರಿ ಕಥೆಗಳು ಎಲ್ಲ ಜಾಯಮಾನದವರಿಗೂ ಆಕರ್ಷಣೀಯವಾಗಿವೆ. ವ್ಯಾವಹಾರಿಕ ನೀತಿ ಹಾಗೂ ಅಧ್ಯಾತ್ಮವನ್ನೂ ಈ ಕಥೆಗಳು ತಮ್ಮ ಒಡಲಲ್ಲಿಟ್ಟುಕೊಂಡಿವೆ. ಈ ನಾಲ್ಕೂ ಕಥೆಗಳು ಫೆಬಲ್ಸ್ (ಪಶುಪಕ್ಷಿಗಳ ಕಥೆಗಳು), ಪ್ಯಾರಾಬಲ್ಸ್ (ಉಪಮಾನ, ಕಥೆ, ದೃಷ್ಟಾಂತ) ಹಾಗೂ ಅಲಿಗರಿ (ರೂಪಕ ಕಥೆ) ಜಾತಿಗೆ ಸೇರಿವೆ. ಮಕ್ಕಳಿಗೆ ರಂಜನೀಯ ಕಥೆಗಳಾದರೆ ದೊಡ್ಡವರಿಗೆ ಲೋಕನೀತಿಯ ಪಾಠಗಳಾಗಿವೆ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
©2024 Book Brahma Private Limited.