ಜಾನಪದ ಕಥೆಗಳಲ್ಲಿ ಹೆಚ್ಚಾಗಿ ಪ್ರಾಣಿ- ಪಕ್ಷಿಗಳು, ರಾಜಕುಮಾರ- ಕುಮಾರಿಯರು, ರಾಕ್ಷಸರು, ಮಾಂತ್ರಿಕರು, ರೈತರು ಹಾಗೂ ಜನ ಸಾಮಾನ್ಯರು ಮುಖ್ಯ ಪಾತ್ರಗಳಾಗಿರುತ್ತಾರೆ. ಉಕ್ರೇನಿನ ಕಥೆಗಳಲ್ಲೂ ಇವೇ ಪ್ರಮುಖವಾಗಿ ಕಂಡು ಬಂದು ದೇಶ-ಖಂಡಗಳು, ಜನಾಂಗಗಳು ಬದಲಾದರೂ ಮಾನವನ ಭಾವನೆಗಳು ಮಾತ್ರ ಒಂದೇ ಎನ್ನಿಸಿತು. ಇದರಲ್ಲಿರುವ ಒಟ್ಟು 27 ಕಥೆಗಳಲ್ಲಿ ಹೆಚ್ಚಿನ ಕಥೆಗಳು 19ನೆಯ ಶತಮಾನದ ದ್ವಿತೀಯಾರ್ಧದಲ್ಲಿ ಪೊಲ್ತಾವ್ ಹಾಗೂ ಕೀಯೆವ್ ಪ್ರದೇಶಗಳಲ್ಲಿ ದಾಖಲಾದವು ಎಂದು ಮುನ್ನುಡಿಯಲ್ಲಿ ಲೇಖಕ ವ್ಲದಿಮಿರ್ ಬೊಯ್ಕೊ ಹೇಳಿದ್ದಾರೆ. ಇತ್ತೀಚೆಗೆ ಆರಂಭವಾದ ರಷ್ಯಾ ಉಕ್ರೇನ್ ಯುದ್ಧದಿಂದ ಅಲ್ಲಿಯ ಕೆಲವು ಪಟ್ಟಣಗಳ ಹೆಸರು ನಮಗೂ ಪರಿಚಿತವಾಗಿವೆ.
©2024 Book Brahma Private Limited.