ವಿಶ್ವಕಥಾಕೋಶದ 10ನೇ ಸಂಪುಟದಲ್ಲಿ ಐರ್‌ಲ್ಯಾಂಡ್, ವೇಲ್ಸ್, ಸ್ಕಾಟ್‌ಲ್ಯಾಂಡ್ ದೇಶದ ಕತೆಗಳಿವೆ. ಅರಬಿ -ಜೇಮ್ಸ್ ಜಾಯ್ಸ್, ಜೂಲಿಯಾಳ ಶಾಪ -ಜಾರ್ಜ್ ಮೂರ್, ರಾಷ್ಟ್ರದ ಅತಿಥಿಗಳು -ಫ್ರಾಂಕ್ ಅ' ಕಾನರ್, ಹೊಂಚು ಸಿಪಾಯಿ -ಲಿಯಾಮ್ ಅ'ಫ್ಲಹರ್ಟಿ, ಮಕ್ಕಳು -ಡೇನಿಯಲ್ ಕಾರ್ಕೆರಿ, ಹುರಿಯ ಹಾಡು -ಡಬ್ಲ್ಯು. ಬಿ. ಯೇಟ್ಸ್, ದಾಂತೆ ಮತ್ತು ಏಡಿ -ಸ್ಯಾಮ್ಯುಯೆಲ್ ಬೆಕೆಟ್, ಕ್ಯಾಲೆಬನ ದೋಣಿ -ರೈಸ್ ಡೇವೀಸ್, ನಾಯಿ ನಕ್ಕಾಗ -ಜಾರ್ಜ್ ಇವಾರ್ಟ್ ಇವಾನ್ಸ್, ಸಮುದ್ರದ ಮುನ್ನೋಟ -ಡಿಲಾನ್ ಥಾಮಸ್, ಜಾನೆಟ್ ಡಾಲ್ರಿಂಪ್‌ಲಳ ಮದುವೆಯ ಕಥೆ -ವಾಲ್ಟರ್ ಸ್ಕಾಟ್, ಮಣ್ಣು -ಲೂಯಿ ಗ್ರಾಸಿಕ್-ಗಿಬ್ಬನ್, ಕಿನ್ನರ ಕುಮಾರ -ಜೆ. ಜೆ. ಬೆಲ್, ಕಡಲು -ನೀಲ್ ಎಮ್. ಗನ್ ಮ್ಯಾಟನಿ -ಫ್ರೆಡ್ ಉರ್ಕುಹಾರ್ಟ್.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE