ಕಥಾಸರಿತ್ಸಾಗರದ ಎಂಟನೆಯ ಸೂರ್ಯಪ್ರಭ ಲಂಬಕ ಈ ಸಂಪುಟದಲ್ಲಿದೆ. ಮನುಷ್ಯನಾಗಿ ಇದ್ದುಕೊಂಡೇ ಸೂರ್ಯ ಪ್ರಭನು ವಿದ್ಯಾಧರ ಚಕ್ರವರ್ತಿಯಾಗುವುದು ಈ ಕೃತಿಯಲ್ಲಿನ ಪ್ರಮುಖ ಕಥಾವಸ್ತು. ಬಾಲ್ಯದಲ್ಲಿಯೇ ಅವನಿಗೆ, ಇಂದ್ರನ ಆಶಯವನ್ನು ಧಿಕ್ಕರಿಸಿ ಮಯಾಸುರನು ಎಲ್ಲಾ ವಿದ್ಯಗಳನ್ನೂ ಕಲಿಸಿಕೊಡುತ್ತಾನೆ. ಸೂರ್ಯಪ್ರಭನು ಯುವರಾಜನಾದ ಮೇಲೆ ದೇಶ ಸಂಚಾರಮಾಡುತ್ತಾ, ಒಂಬತ್ತು ಸುಂದರಿಯರನ್ನು ಮದುವೆಯಾಗಿ ರಾಜ್ಯಕ್ಕೆ ಹಿಂದಿರುಗುತ್ತಾನೆ. ನಂತರ ಮಯನ ಪ್ರೇರಣೆಯ ಮೇಲೆ, ತನ್ನ ಪ್ರತಿಸ್ಪರ್ಧಿಯಾಗಿದ್ದ ಶ್ರುತಶರ್ಮನ ಮೇಲೆ ಆಕ್ರಮಣ ಮಾಡುತ್ತಾನೆ. ಈಶ್ವರನ ಸಂಧಾನದಿಂದಾಗಿ ದಕ್ಷಿಣವೇದಿ ಮತ್ತು ಉತ್ತರ ವೇದಿಗಳಿಗೆ ಇವರಿಬ್ಬರೂ ಚಕ್ರವರ್ತಿಗಳಾಗಿ, ದೇವಾಸುರರ ನಡುವೆ ಮೈತ್ರಿ ಏರ್ಪಡುತ್ತದೆ. ಈ ಎಲ್ಲಾ ವಿಷಯಗಳ ಬಗ್ಗೆ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.